ಇಂಜೆಕ್ಷನ್ ಎಂದರೆ ಒಂದಷ್ಟು ಮಂದಿಗೆ ಭಾರೀ ಹೆದರಿಕೆ...! ಮಕ್ಕಳೆಂದಲ್ಲ, ದೊಡ್ಡವರು ಕೂಡಾ ಚುಚ್ಚುಮದ್ದಿಗೆ ಹೆದರುತ್ತಾರೆ. `ಬರೀ ಮಾತ್ರ ಕೊಡಿ. ಇಂಜೆಕ್ಷನ್ ಬೇಡ ಪ್ಲೀಸ್' ಎಂದು ವೈದ್ಯರ ಬಳಿ ನಯವಾಗಿ ಮನವಿ ಮಾಡುವವರೂ ಇಲ್ಲ ಎಂದಲ್ಲ. ಅಷ್ಟರಮಟ್ಟಿಗೆ ಒಂದಷ್ಟು ಮಂದಿಗೆ ಚುಚ್ಚುಮದ್ದಿನ ಬಗ್ಗೆ ಭಯ. ಈ ಭಯದ ನಿವಾರಣೆಗೆ "ಸ್ವಿಚ್ವರ್ಡ್ಸ್" ಹೇಗೆ ಸಹಾಯ ಮಾಡುತ್ತೆ ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.