ಹೆಣ್ಣುಮಕ್ಕಳಿಗೆ ಗೌರಿಹಬ್ಬದ ಬಾಗಿನ ಎಷ್ಟು ಮಹತ್ವದ್ದು ಗೊತ್ತೇ?
ಗೌರಿಹಬ್ಬ ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ವಿಶೇಷ. ಅವರನ್ನು ಗಂಡನ ಮನೆಯಲ್ಲಿ ಎಷ್ಟೇ ಸೌಕರ್ಯ, ಸೌಲಭ್ಯಗಳಿಂದ ನೋಡಿಕೊಂಡರೂ.. ಅವರಿಗೆ ತವರಿನಿಂದ ಸಿಗುವ ಪ್ರೀತಿಯೊಂದಿಗಿನ ಬಾಗಿನದ ಸ್ಥಾನವನ್ನು ತುಂಬುವುದಿಲ್ಲ. ಅದು ಎಷ್ಟೇ ಚಿಕ್ಕ ಉಡುಗೊರೆಯಾದರೂ ಸಹ ಅದು ನೀಡುವ ಸಂತೋಷಕ್ಕೆ ಎಲ್ಲೆಯೇ ಇಲ್ಲ. ಇನ್ನು ಗೌರಿಹಬ್ಬದ ಸಂಭ್ರಮದಲ್ಲಿ ತವರಿನಲ್ಲಿ ಇದ್ದು ಅಲ್ಲಿ ಕಾಲ ಕಳೆಯುವುದು ಎಂದರೆ ತುಂಬಾ ಖುಷಿ ನೀಡುತ್ತದೆ ಹೆಣ್ಣು ಮಕ್ಕಳಿಗೆ. ಈ ಗೌರಿಹಬ್ಬದ ಬಾಗಿನ ಹಾಗೂ ಗಣೇಶ ಹಬ್ಬದ ಸಂಬ್ರದ ಮಹತ್ವವನ್ನು ಈ ವಿಡಿಯೋದಲ್ಲಿ ತಿಳಿಸಿದ್ದಾರೆ ಡಾ ದೀಪಕ್ ಗುರೂಜಿ ರವರು.