ಬಾಗಲಕೋಟೆ: ನಿವೃತ್ತ ಪೊಲೀಸ್ ಈಗ ಸಾವಯವ ಕೃಷಿಕ, ಗೊಬ್ಬರ ತಯಾರಿಕೆ ಬಗ್ಗೆ ಜಾಗೃತಿ
1075 views
bagalkot ವಿಡಿಯೋಗಳಿಗೆ ಚಂದಾದಾರರಾಗಿಬಾಗಲಕೋಟೆ: ಸರಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ರೈತರಾಗಿ ಹೊಸ ಜೀವನ ಸಾಗಿಸುತ್ತಿರುವ ಶ್ರೀಶೈಲ ಕೋಗಲಿ, ರೈತರಿಗೆ ಸಾವಯವ ಗೊಬ್ಬರದ ಜಾಗೃತಿ ಮೂಡಿಸುವ ಜೊತೆಗೆ ಉಚಿತವಾಗಿ ಸಾವಯವ ಗೊಬ್ಬರ ವಿತರಣೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಸೇನೆ ಮತ್ತು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಇವರು ಬಾಗಲಕೋಟೆ ಅನಗವಾಡಿ ಪುನರ್ವಸತಿ ಕೇಂದ್ರದ ಬಳಿ ಸುಮಾರು 8 ಎಕರೆ ಜಮೀನು ಹೊಂದಿದ್ದಾರೆ. ಈ ಜಮೀನಿನಲ್ಲಿ ಸ್ವತಃ ತಯಾರು ಮಾಡಿರುವ ಸಾವಯವ ಗೊಬ್ಬರ ಬಳಕೆ ಮಾಡಿಕೊಂಡು ಗುಣಮಟ್ಟದ ಫಸಲು ತೆಗೆಯುತ್ತಿದ್ದಾರೆ. ಇದೇ ಜಮೀನಿನಲ್ಲಿ 'ಕೃಷಿ ಕುಟೀರ' ನಿರ್ಮಾಣ ಮಾಡಿ, ವಿವಿಧ ಬಗೆಯ ಸಾವಯವ ಗೊಬ್ಬರ ತಯಾರಿಸುತ್ತಿದ್ದಾರೆ.
ಗೋಕೃಪಾಮೃತ ಎಂದು ಗೋವು ಮೂತ್ರ ಮತ್ತು ಸಗಣೆಯಿಂದ ಸಾವಯವ ಗೊಬ್ಬರ ಸಿದ್ದಪಡಿಸಿ ಜಮೀನಿಗೆ ಬಳಸುತ್ತಿದ್ದಾರೆ. ಜಮೀನು ವೀಕ್ಷಣೆ ಮಾಡಲು ಬರುವ ರೈತರಿಗೆ ಉಚಿತವಾಗಿ ಒಂದು ಬಾಟಲಿಯಲ್ಲಿ ಈ ಸಾವಯವ ಮಿಶ್ರಣ ಕೊಟ್ಟು ಕಳಿಸುತ್ತಾರೆ. ಸಾವಯವ ಗೊಬ್ಬರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮಜ್ಜಿಗೆ, ಬೆಲ್ಲ, ಮೊಸರು ಕೊಳೆಯಲು ಬಿಟ್ಟು ಅದರಿಂದ ತಯಾರ ಆಗುವ ಪದಾರ್ಥ, ಬಿಲ್ವ ಪತ್ರೆ ಕಾಯಿ, ಎಲೆಯಿಂದ ತಯಾರಿಸಿದ ಗೊಬ್ಬರ, ಈರುಳ್ಳಿಯನ್ನು ನೀರಿನಲ್ಲಿ ಕೊಳೆಸಿ ತಯಾರಿಸುವ ದ್ರಾವಣದಬಗ್ಗೆ ಮಾಹಿತಿ ಕೊಡುತ್ತಾರೆ.