ಬಿಜೆಪಿಯ ಸಾಕಷ್ಟು ಅತೃಪ್ತ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ; ಲಕ್ಷ್ಮಣ್ ಸವದಿ ಹೊಸ ಬಾಂಬ್
1065 views
bagalkot ವಿಡಿಯೋಗಳಿಗೆ ಚಂದಾದಾರರಾಗಿಬಾಗಲಕೋಟೆ:ಬಿಜೆಪಿಯ ಬಹಳಷ್ಟು ಅತೃಪ್ತ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಇಲ್ಲಿ ಬಂದ ಮೇಲೆ ಅವರ ಸ್ಥಾನಮಾನದ ಬಗ್ಗೆಯೂ ಆಲೋಚನೆ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಲಕ್ಷ್ಮಣ್ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ಅನೇಕ ಬಿಜೆಪಿ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ, ಅವರ ಕ್ಷೇತ್ರದಲ್ಲಿ ಸಹಮತ ಇರುವ ಬಗ್ಗೆ ಚರ್ಚೆ ಮಾಡುತ್ತೇವೆ. ಬರುವವರನ್ನ ಕರೆತಂದಾಗ ಯಾರಿಗೂ ಅನ್ಯಾಯ ಮತ್ತು ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಈಗ ಎಷ್ಟು ಜನ ತಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸವದಿ, ನಾವು ಗೋಲಿ ಹೊಡೆಯುವಾಗ ಎರಡು ರೀತಿಯಿಂದ ಹೊಡೆಯುತ್ತೇವೆ. ಒಂದು ಚರ್ರಿಗೋಲಿ ಅಂತ ಇರುತ್ತೇ, ಅದು ಛಿದ್ರವಾಗಿರುತ್ತೇ, ಅದು ಎಷ್ಟು ಮಂದಿಗೆ ಬಡಿಯುತ್ತೋ ಗೊತ್ತಿಲ್ಲ. ಫೈರಿಂಗ್ನಲ್ಲಿ ಎರಡು ರೀತಿ ಇರುತ್ತೇ, ಯಾವಾಗ ಯಾವ ಸಂದರ್ಭದಲ್ಲಿ ಯಾವ ಫೈರಿಂಗ್ ಹೊಡೆಯುತ್ತೇವೆ ಗೊತ್ತಿಲ್ಲ ಎಂದರು, ಫೈರಿಂಗ್ ಮಾಡೋದೆ ಫಿಕ್ಸಾ ಎಂಬ ಪ್ರಶ್ನೆಗೆ, ಇದು ನಮ್ಮ ಕರ್ತವ್ಯ, ಯಾಕೆಂದ್ರೆ ಲೋಕಸಭೆಯಲ್ಲಿ ಗೆಲ್ಲಬೇಕಾದ್ರೆ ರಾಜಕೀಯದಲ್ಲಿ ಕೆಲವೊಂದು ದೃವೀಕರಣ ಮಾಡಬೇಕಾಗುತ್ತೇ, ಅದನ್ನ ನಾವು ಮಾಡುತ್ತಿದ್ದೇವೆ ಎಂದು ಟಾಂಗ್ ನೀಡಿದರು.
ಇದು ಆಪರೇಷನ್ ಹಸ್ತ ಅಲ್ಲ, ಯಾರು ಬಿಜೆಪಿಯಲ್ಲಿ ನಮಗೆ ಅವಹೇಳನಕಾರಿಯಾಗಿದೆ, ಬೇಸತ್ತಿದ್ದೇವೆ ಅಂತ ಹೇಳುತ್ತಿದ್ದಾರೋ, ಅಂತವರನ್ನ ಗೌರವದಿಂದ ಪಕ್ಷಕ್ಕೆ ಕರೆತರುವ ಕೆಲಸ ಮಾಡುತ್ತೆವೆ ಎಂದರು. ವಿಜಯೇಂದ್ರ ಮತ್ತು ಆರ್ ಅಶೋಕ್ ಜೋಡೆತ್ತುಗಳಾಗಿ ಲೋಕಸಭೆ ಗೆಲ್ಲುವ ವಿಚಾರವಾಗಿ ಮಾತನಾಡಿದ ಸವದಿ ಅವರು, ಬರೀ ಜೋಡೆತ್ತಲ್ಲ, ಉತ್ತರ ಕರ್ನಾಟಕದಲ್ಲಿ ನಾಲ್ಕು ಎತ್ತು ಹೊಡೆಯುವ ಪದ್ಧತಿ ಇದೆ. ಅದನ್ನು ಮಾಡಿದ್ರೂ ಸಹ ಏನು ಮಾಡೋದಕ್ಕೆ ಆಗೋದಿಲ್ಲ. ಜೋಡೆತ್ತಲ್ಲ, ನಾಲ್ಕೆತ್ತು ಹೂಡಿದ್ರೂ ಸಹ ಅದನ್ನ ಎಳೆಯೋಕೆ ಆಗೋದಿಲ್ಲ. ಜೋಡೆತ್ತುಗಳಲ್ಲಿ ಆ ಶಕ್ತಿ ಉಳಿದಿಲ್ಲ ಎಂದ ಅವರು, ನೆಲ ಗಟ್ಟಿಯಾಗಿದೆ, ಬಿರುಸಾಗಿದೆ, ಆದರೆ ಎರಡೆತ್ತು ಎಳೆದ್ರೆ ಎಳೆಯುವಂತಹ ಶಕ್ತಿ ಅಲ್ಲಿ ಉಳಿದಿಲ್ಲ. ಆ ನೇಗಿಲು ನೋಡಿದ್ರೆ ಎಂಟತ್ತು ಎತ್ತು ಹೂಡಿದ್ರೆ ಜಗ್ಗು ಪರಿಸ್ಥಿತಿ ಇಲ್ಲ ಎಂದರು.