ನನ್ನ ಮೌನವೂ ವೀಕ್ನೆಸ್ ಅಲ್ಲ ; ಸತೀಶ್ ಜಾರಕಿಹೊಳಿಗೆ ಟಾಂಗ್ ಕೊಟ್ರಾ ಲಕ್ಷ್ಮೀ ಹೆಬ್ಬಾಳ್ಕರ್?
ಬೆಳಗಾವಿ: ನನ್ನ ಮೌನವೂ ವೀಕ್ನೆಸ್ ಅಲ್ಲ, ಸತೀಶ್ ಜಾರಕಿಹೊಳಿ ಮೌನವೂ ವೀಕ್ನೆಸ್ ಅಲ್ಲ ಎನ್ನುವ ಮೂಲಕ ಜಾರಕಿಹೊಳಿಗೆ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನನ್ನ ಮೌನವೂ ವೀಕ್ನೆಸ್ ಅಲ್ಲ ಎನ್ನುವ ಮೂಲಕ ಸತೀಶ್ ಜಾರಕಿಹೊಳಿಗೆ ಟಾಂಗ್ ಕೊಟ್ರಾ ಎಂಬ ಚರ್ಚೆ ಶುರುವಾಗಿದೆ. ಜಿಲ್ಲಾ ಕಾಂಗ್ರೆಸ್ನಲ್ಲಿ ಸಣ್ಣ ಸಮಸ್ಯೆ ಕೂಡ ಇಲ್ಲ, ಬಹಳಷ್ಟು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ನನ್ನ ಮಧ್ಯೆ ಸತೀಶ್ ಮಧ್ಯೆ ಯಾವುದೇ ಸಮಸ್ಯೆ ಇಲ್ಲ, ಮೈಸೂರು ಹೋಗೊಕೆ ಸತೀಶ್ ಜಾರಕಿಹೊಳಿ ನನ್ನನ್ನು ಕರೆದಿದ್ದರು. ನನ್ನ ಟಿಕೆಟ್ ಕೂಡ ಬುಕ್ ಮಾಡಿದ್ರು. ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು ಮೈಸೂರು ಹೋಗಲು ಪ್ಲ್ಯಾನ್ ಮಾಡಿದ್ರೂ. ಸಕ್ಕರೆ ಕಾರ್ಖಾನೆ ಬಾಯ್ಲರ್ ಪೂಜೆ ಹಿನ್ನೆಲೆಯಲ್ಲಿ ನಾನು ಹೊಗಲಿಲ್ಲ ಎಂದು ಹೇಳಿದರು.
ಹೈಕಮಾಂಡ್ ಯಾಕೆ ತಡೆಯಿತು ಅನ್ನೋದನ್ನ ಅವರಿಗೆ ಕೇಳಿ, ನೆಕ್ಸ್ಟ್ ಎಪಿಸೋಡ್ ಸತೀಶ್ ಅವರನ್ನೇ ಕೇಳಿ ಎಂದ ಹೆಬ್ಬಾಳ್ಕರ್. ಡಿಸಿಎಂ ಡಿಕೆಶಿ ಭೇಟಿಗೆ ಶಾಸಕರು, ಜಿಲ್ಲಾಧ್ಯಕ್ಷರು ಬಾರದಿರುವ ವಿಚಾರಕ್ಕೆ ಮಾತನಾಡಿದ ಅವರು, ಅಧ್ಯಕ್ಷರ ಪ್ರವಾಸದಲ್ಲಿ ಮೊದಲು ಗೊಂದಲದಲ್ಲಿ ಇತ್ತು. ಯಾರಾದರೂ ಬಂದು ಸ್ವಾಗತ ಮಾಡಬೇಕಿತ್ತು ಎಂದು ಹೇಳಿದರು.
belagaviTimesXP KannadaUpdated: 21 Oct 2023, 5:53 pm - cities
- belagavi
- Minister Lakshmi Hebbalkar Said That There Is No Discontent In Belagavi District Congress