ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ 'ಕಾವೇರಿ' ಹೋರಾಟ, ಪ್ರತಿಭಟನಾಕಾರರನ್ನು ಒಂದೆಡೆ ಕರೆತಂದ ಪೊಲೀಸ್!
1248 views
bengaluru ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಕಾವೇರಿ ವಿಚಾರವಾಗಿ ಬೆಂಗಳೂರು ಬಂದ್ ಪ್ರತಿಭಟನೆಯ ಸಂದರ್ಭದಲ್ಲಿ ರೈತರ ಪರವಾಗಿ ಹೋರಾಟ ನಡೆಸಿದ ಪ್ರತಿಭಟನಾಕಾರರು ಬಾಯಿಗೆ ಮಣ್ಣು ಹಾಕಿಕೊಂಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ''ರೈತರ ಬಾಯಿಗೆ ಮಣ್ಣು ಹಾಕುತ್ತಿರುವ ಸರಕಾರಕ್ಕೆ ಧಿಕ್ಕಾರ, ಸಿಎಂಗೆ ಧಿಕ್ಕಾರ, ಜಲಸಂಪನ್ಮೂಲ ಸಚಿವರಿಗೆ ಧಿಕ್ಕಾರ'' ಎಂದು ಘೋಷಣೆ ಕೂಗಿದರು.
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ವೇಳೆ ರೈತ ಸಂಘಟನೆಗಳ ಕಾರ್ಯಕರ್ತರು ಚಾಟಿ ಬೀಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸಾಮಾಜಿಕ ಹೋರಾಟಗಾರ ಗಂಡಸಿ ಸದಾನಂದ ಸ್ವಾಮಿ ತಮ್ಮ ಸ್ಕೂಟರ್ ನಲ್ಲಿ ಸಾಹಿತಿಗಳ ಫೋಟೋಗಳನ್ನು ಹಾಕಿ ಅವರ ಮೌನದ ಬಗ್ಗೆ ಪ್ರಶ್ನಿಸಿದ್ದಾರೆ. ತಮ್ಮ ಸ್ಕೂಟರ್ ನಲ್ಲಿ ಕವಿಗಳು ಸಾಹಿತಿಗಳು, ಹೋರಾಟಗಾರ ಫೋಟೋಗಳನ್ನು ಹಾಕಿ ಕಾವೇರಿ ಹೋರಾಟಕ್ಕೆ ಏಕೆ ಬೆಂಬಲ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ನಗರದ ಟೌನ್ಹಾಲ್ ಹಾಗೂ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು ಫ್ರೀಡಂ ಪಾರ್ಕ್ಗೆ ಕರೆತಂದರು.