ಬಾ ಬಾ ಅಂತಿದೆ ಬನ್ನೇರುಘಟ್ಟ..ಸಫಾರಿಲಿ ಕಂಡಿದ್ದೇನು ಗೊತ್ತ?
ಬನ್ನೇರುಘಟ್ಟ: ಬೆಂಗಳೂರಿನಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಬನ್ನೇರುಘಟ್ಟದ ಜೈವಿಕ ಉದ್ಯಾನದಲ್ಲಿ ಸಫಾರಿ ಅನುಭವ ನೀವು ಪಡೆಯಲೇಬೇಕು.. ಹೌದು ಗಾಂಭೀರ್ಯದ ನಡಿಗೆಯ ಹುಲಿ, ಮರದ ನೆರಳಲ್ಲಿ ಗತ್ತಿನಿಂದ ಕುಳಿತಿರುವ ಸಿಂಹಗಳು, ಕೆರೆ ನೀರಲ್ಲಿ ಆಟವಾಡುತ್ತಾ- ಮಣ್ಣು ಕೆಸರನ್ನು ಮೈಮೇಲೆ ಅದ್ದಿಕೊಳ್ಳುವ ಆನೆಗಳ ಹಿಂಡು, ನೆರಳಲ್ಲಿ ಹುಲ್ಲು ಮೇಯುವ ಜಿಂಕೆಗಳು, ಆಹಾರ ಹುಡುಕುತ್ತಾ ಸಾಗುವ ನವಿಲು ಹೀಗೆ ವನ್ಯ ಪ್ರಾಣಿ ಪಕ್ಷಿಗಳನ್ನು ನೋಡುತ್ತಿಂದತೇ ಮನಸ್ಸು ಕುತೂಹಲದಿಂದ ಕುಣಿಯತೊಡಗುತ್ತದೆ.. ಇನ್ನು ಹಸಿರು ಮರಗಿಡಗಳಿಂದ ತುಂಬಿದ ಕಾಡು ದಾರಿ ಎಲ್ಲರನ್ನು ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತದೆ.. ಇದು ಬನ್ನೇರುಘಟ್ಟದ ಸಫಾರಿ ಅನುಭವ. ಚಿಕ್ಕ ಮಕ್ಕಳಿಗಂತೂ ಪ್ರಾಣಿ ಪಕ್ಷಿ, ಕಾಡನ್ನು ನೋಡುವುದೆಂದರೆ ಎಲ್ಲಿಲ್ಲದ ಖುಷಿ..
ಬನ್ನೇರುಘಟ್ಟ ಜೈವಿಕ ಉದ್ಯಾನವು 731 ಹೆಕ್ಟೇರ್ ಪ್ರದೇಶದಲ್ಲಿದೆ.. ಇಲ್ಲಿ ಒಟ್ಟು 14 ಕಿ.ಮೀ ಸಫಾರಿ ಕರೆದುಕೊಂಡು ಹೋಗುತ್ತಾರೆ. ಮಂಗಳವಾರ ಹೊರತುಪಡಿಸಿ ಇನ್ನೇಲ್ಲಾ ದಿನವೂ ಸಫಾರಿ ಇರುತ್ತದೆ. ರಾಷ್ಟ್ರೀಯ ಹಬ್ಬ, ಸರ್ಕಾರಿ ರಜೆ ದಿನಗಳಂತೂ ಸಫಾರಿಗೆ ತುಂಬಾ ಡಿಮ್ಯಾಂಡ್ .. ಜೊತೆಗೆ ಇಲ್ಲಿಗೆ ವಾರದ ದಿನವೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ ಅನ್ತಾರೆ ಸಫಾರಿ ಸಿಬ್ಬಂದಿ ಶೇಖರ್ ಅವ್ರು.. ಶೇಖರ್ ಅವ್ರಿಗೆ 11 ವರ್ಷದ ಅನುಭವ ಇದ್ದು, ಪ್ರತೀ ಸಫಾರಿಯೂ ಖುಷಿ ಕೊಡುತ್ತೆ ಅಂತಾರೆ..
bengaluruTimesXP KannadaUpdated: 2 Jun 2023, 3:09 pm - cities
- bengaluru
- Bengaluru Bannerghatta National Park Zoo Safari Wildlife And Birds Watching