'ಇಂಡಿಯಾ' ಹೆಸರು 'ಭಾರತ್' ಎಂದು ಬದಲಾಗ್ಬೇಕಾ? ಜನ ಏನಂತಾರೆ?
1457 views
bengaluru ವಿಡಿಯೋಗಳಿಗೆ ಚಂದಾದಾರರಾಗಿಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 'ಇಂಡಿಯಾ' ಹೆಸರನ್ನು 'ಭಾರತ' ಎಂದು ಮರುನಾಮಕರಣ ಮಾಡುವ ಹೊಸ ನಿರ್ಣಯವನ್ನು ಸಂಸತ್ನ ವಿಶೇಷ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 'ಇಂಡಿಯಾ' ಬದಲು ದೇಶದ ಹೆಸರನ್ನು 'ಭಾರತ' ಎಂದು ಕರೆಯಬೇಕು ಎಂಬುದಾಗಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಲಹೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ರಾಜಧಾನಿ ದಿಲ್ಲಿಯಲ್ಲಿ ಸೆ 8ರಿಂದ ನಡೆಯಲಿರುವ ಜಿ20 ಶೃಂಗಸಭೆಯ ಆಹ್ವಾನ ಪತ್ರಿಕೆ ಈ ಕುರಿತಾದ ಅನುಮಾನಗಳಿಗೆ ಪುಷ್ಟಿ ನೀಡಿದೆ. ಜಿ20 ಶೃಂಗಸಭೆಗೆ ಬರುವ ಪ್ರತಿನಿಧಿಗಳಿಗೆ ರಾಷ್ಟ್ರಪತಿ ಭವನ ಸೆ 9ರಂದು ಆಯೋಜಿಸಿರುವ ಡಿನ್ನರ್ನ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿ ಮುರ್ಮು ಅವರ ಹುದ್ದೆಯನ್ನು 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಉಲ್ಲೇಖಿಸಲಾಗಿದೆ. ಈವರೆಗೂ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಎಂದೇ ಕರೆಯಲಾಗುತ್ತಿತ್ತು. ದೇಶದ ಹೆಸರನ್ನು ಇಂಡಿಯಾ ಬದಲಾಗಿ ಭಾರತ ಎಂದು ಬದಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಹೊರಬಿದ್ದ ಕೂಡಲೇ ಟ್ವಿಟ್ಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಕಾವೇರಿದ ಚರ್ಚೆ ನಡೆಯುತ್ತಿದೆ. ಬಹುತೇಕರು ಮೋದಿ ಸರ್ಕಾರದ ನಿಲುವು ಸೂಕ್ತವಾಗಿದೆ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಹಲವು ಗಣ್ಯರು ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಬದಲಿಸಬೇಕೆಂದು ಕರೆ ನೀಡಿದ್ದ ವಿಡಿಯೋಗಳನ್ನೂ ಈಗ ಶೇರ್ ಮಾಡಲಾಗುತ್ತಿದೆ.