ಭಾಲ್ಕಿ: ನೆಚ್ಚಿನ ಶಿಕ್ಷಕನ ವರ್ಗಾವಣೆ, ಭಾವುಕರಾದ ವಿದ್ಯಾರ್ಥಿಗಳು
ಬೀದರ್ ವಿಡಿಯೋಗಳಿಗೆ ಚಂದಾದಾರರಾಗಿ
ಬೀದರ್: ವಿದ್ಯಾರ್ಥಿಗಳು ಅಳುತ್ತಾ ತಮ್ಮ ಪ್ರೀತಿಯ ಶಿಕ್ಷಕರನ್ನು ಬಿಗಿದಪ್ಪಿದ ದೃಶ್ಯವೊಂದು ವೈರಲ್ ಆಗುತ್ತಿದೆ. ತಮ್ಮ ನೆಚ್ಚಿನ ಶಿಕ್ಷಕ ವರ್ಗಾವಣೆಯಾಗುತ್ತಿರುವುದೇ ಇವರ ವಿದ್ಯಾರ್ಥಿಗಳ ಕಣ್ಣೀರಿಗೆ ಕಾರಣ. ಈ ಘಟನೆ ನಡೆದಿದ್ದು ಬೀದರನಲ್ಲಿ. ಶಾಲೆ ಮಕ್ಕಳು ಮತ್ತು ಶಿಕ್ಷಕರ ನಡುವೆ ವಿದ್ಯಾಭ್ಯಾಸದ ಜತೆ ಪ್ರೀತಿ, ವಿಶ್ವಾಸ, ನಂಬಿಕೆ ಬೆಳೆಯುವುದು ಸರ್ಕಾರಿ ಶಾಲೆಗಳಲ್ಲೇ ಎಂಬುದಕ್ಕೆ ಇದು ತಾಜಾ ಉದಾಹರಣೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ದಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 22 ವರ್ಷಗಳಿಂದ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಗಿಪ್ಸನ್ ನೆಲ್ಸನ್ ವರ್ಗಾವಣೆಗೊಂಡ ಕಾರಣ ವಿದ್ಯಾರ್ಥಿಗಳು ಕಣ್ಣೀರಾಕಿದ್ದಾರೆ. ಗಿಪ್ಸನ್ ನೆಲ್ಸನ್ ಈ ಶಾಲೆಯಲ್ಲಿ 22 ವರ್ಷಗಳಿಂದ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಲಖನಗಾಂವ್ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿದ್ದಾರೆ.
ಮಕ್ಕಳನ್ನು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಅವರು ಗಾಯನವನ್ನೂ ಸಹ ಮಾಡುತ್ತಿದ್ದರು. ಹತ್ತನೇ ತರಗತಿ ಮಕ್ಕಳಿಗೆ ವಿಜ್ಞಾನ ಚಿತ್ರ ಸರಳ ರೀತಿಯಲ್ಲಿ ಬಿಡಿಸಿ ತೋರಿಸಿದ್ದರು, ಮಕ್ಕಳಿಗೆ ಜಿಲ್ಲಾ, ತಾಲ್ಲೂಕು ಮಟ್ಟದ ಕಾರ್ಯಕ್ರಮಗಳಲ್ಲಿ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿಕೊಡುತ್ತಿದ್ದರು. ಇವರಲ್ಲಿ ಕಲಿತ ಮಕ್ಕಳು ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ ಪ್ರಶಸ್ತಿ ಸಹಪಡೆದಿದ್ದಾರೆ. ಹೀಗಾಗಿ ಸಹಜವಾಗಿಯೇ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಸದ್ಯ ವರ್ಗಾವಣೆಗೊಂಡ ಕಾರಣ ಶಿಕ್ಷಕ ಗಿಪ್ಸನ್ ನೆಲ್ಸನ್ ಕೋಟೆ ಅವರು ದಾಡಗಿ ಪ್ರೌಢಶಾಲೆಯಿಂದ ಬಿಡುಗಡೆಗೊಂಡಿದ್ದಾರೆ.