ಸೆ.11ರಿಂದ ಸಾವರಿನ್ ಗೋಲ್ಡ್ ಬಾಂಡ್: ಚಿನ್ನದ ಬಾಂಡ್ಗೆ ಮುಗಿಬಿದ್ದ ಜನ, ಯಾಕಾಗಿ ಗೊತ್ತಾ?
1102 views
ದಾವಣಗೆರೆ ವಿಡಿಯೋಗಳಿಗೆ ಚಂದಾದಾರರಾಗಿದಾವಣಗೆರೆ: ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ, ಕಳ್ಳರ ಕಾಟ, ಭದ್ರತೆ ದೃಷ್ಟಿಯಿಂದ ಅಂಚೆ ಇಲಾಖೆ ಚಿನ್ನದ ರೂಪದಲ್ಲಿ ಬಾಂಡ್ ತಂದಿದೆ. ಇದರಿಂದ ಕೇವಲ ಲಾಭ ಮಾತ್ರವಲ್ಲದೇ, ಜನರಿಗೆ ಉಪಯೋಗವಾಗಲಿದೆ ಎಂದು ಅಂಚೆ ಅಧೀಕ್ಷಕ ಚಂದ್ರಶೇಖರ್ ತಿಳಿಸಿದ್ದಾರೆ. ಸೆಪ್ಟೆಂಬರ್ 11ರಿಂದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ (ಎಸ್ಜಿಬಿ)ನ 2023-24ರ ಎರಡನೇ ಸರಣಿ ಆರಂಭವಾಗಿದ್ದು, ಸೆ.15 ಕಡೆ ದಿನ. ಯಾರು ಬೇಕಾದರೂ ಬಾಂಡ್ ತೆಗೆದುಕೊಳ್ಳಬಹುದಾಗಿದ್ದು, ರೂ.5923 ದಿಂದ ಆರಂಭವಾಗಲಿದೆ. ಆನ್ಲೈನ್ ಹಾಗೂ ಆನ್ ಲೈನ್ನಲ್ಲಿ ಅಂಚೆಕಚೇರಿಗೆ ಹೋಗಿ ಹೂಡಿಕೆ ಮಾಡಬಹುದಾಗಿದ್ದು,ಚಿನ್ನದ ರೂಪದಲ್ಲಿ ಬಾಂಡ್ ಸಿಗಲಿದೆ.ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವರಿಗೆ 50 ರೂ.ಗಳ ವಿಶೇಷ ರಿಯಾಯಿತಿಯೂ ಇದೆ. ಅಂದರೆ ನಿಮಗೆ 5,873 ರೂ.ನಲ್ಲಿ ಪ್ರತಿ ಗ್ರಾಂ ಸಾವರಿನ್ ಗೋಲ್ಡ್ ಬಾಂಡ್ ಸಿಗಲಿದ್ದು, 24 ಕ್ಯಾರೆಟ್ ಅಂದರೆ ಶೇ. 99.9 ಶುದ್ಧತೆ ಚಿನ್ನ ಇದಾಗಿದೆ. ಸಾವರಿನ್ ಗೋಲ್ಡ್ ಬಾಂಡ್ ಸರ್ಕಾರಿ ಬಾಂಡ್ ಆಗಿದೆ. ಈ ಬಾಂಡ್ ಡಿಮ್ಯಾಟ್ ರೂಪದಲ್ಲಿದ್ದು, ಆರ್ಬಿಐ ನೀಡುತ್ತದೆ.
ಸಾವರಿನ್ ಗೋಲ್ಡ್ ಬಾಂಡ್ ಮೇಲಿನ ಹೂಡಿಕೆಗೆ ವಾರ್ಷಿಕ ಶೇ. 2.5ರಷ್ಟು ಬಡ್ಡಿ ಸಿಗಲಿದೆ. ಹಣದ ಅಗತ್ಯವಿದ್ದರೆ ಈ ಬಾಂಡ್ ಮೇಲೆ ಸಾಲವನ್ನೂ ಪಡೆಯಬಹುದು. ಭಾರತೀಯ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ಲಿ. ಅಂದರೆ ಐಜಿಬಿಎ ಪ್ರಕಟಿತ ದರದ ಆಧಾರದ ಮೇಲೆ ಬಾಂಡ್ಬೆಲೆಯನ್ನು ನಿರ್ಧರಿಸಲಾಗುತ್ತದೆ. ಇದರಲ್ಲಿ, ಚಂದಾದಾರಿಕೆ ಅವಧಿಯ ಹಿಂದಿನ ವಾರದ ಕೊನೆಯ ಮೂರು ದಿನಗಳ ಸರಾಸರಿ ದರವನ್ನು ಪರಿಗಣಿಸಲಾಗುತ್ತದೆ.
ಸಾವರಿನ್ ಗೋಲ್ಡ್ ಬಾಂಡ್ನ ಅನುಕೂಲಗಳಲ್ಲಿ ಇದೂ ಒಂದು. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ)ಪ್ರಕಾರ ಭಾರತೀಯ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ (ಐಬಿಜೆಎ) ಪ್ರಕಟಿಸಿದ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯೊಂದಿಗೆ ಚಿನ್ನದ ಬಾಂಡ್ಗಳ ಬೆಲೆಯನ್ನು ನಿಗದಿಪಡಿಸಲಾಗಿದೆ. ಇದರೊಂದಿಗೆ, ಇದನ್ನು ಡಿಮ್ಯಾಟ್ ರೂಪದಲ್ಲಿ ಇರಿಸಬಹುದು. ಇದನ್ನು ಸ್ವತಃ ಆರ್ಬಿಐ ನೀಡುವುದರಿಂದ, ಇದು ಸಂಪೂರ್ಣ ಸುರಕ್ಷಿತವಾಗಿದೆ.