Free Bus Travel For Women : ಹುಬ್ಬಳ್ಳಿಯ ಆಟೋ, ಕ್ಯಾಬ್ ಚಾಲಕರ ಜೀವನ ಮುಂದೇನು?
1073 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಿ ಜಾರಿ ಮಾಡಿದೆ. ಐದು ಗ್ಯಾರಂಟಿಗಳ ಪೈಕಿ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕೂಡ ಒಂದು. ಆದರೆ, ಈ ಯೋಜನೆಯಿಂದ ಆಟೋ ಹಾಗೂ ಕ್ಯಾಬ್ ಚಾಲಕರ ಬದುಕಿಗೆ ಬರೆ ಬಿದ್ದಂತಾಗಿದ್ದು, ಅದನ್ನೇ ನಂಬಿದವರ ಗತಿ ಏನು ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 10 ಸಾವಿರ ಆಟೋಗಳಿದ್ದು, ಮೊದಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಹಾಗೂ ಪೊಲೀಸರ ಬೇಕಾಬಿಟ್ಟಿ ಕಾನೂನುಗಳಿಂದ ಆಟೋ ಚಾಲಕರ ಬೇಸತ್ತು ಹೋಗಿದ್ದಾರೆ. ಈಗ ಈ ಯೋಜನೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ನಮ್ಮ ಪ್ರತಿನಿಧಿ ಕಲ್ಮೇಶ್ ಮಂಡ್ಯಾಲ್ ಆಟೋ ಚಾಲಕರನ್ನು ಮಾತನಾಡಿಸಿದ್ದಾರೆ.