ಮಹಿಳೆಗೆ ಹೆರಿಗೆ ನೋವು ಜೋರಾಗಿದ್ದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಅಶೋಕ ಪೂಜಾರ, ಬಸವರಾಜ ರಾಠೋಡ ಎಂಬ ಸಿಬ್ಬಂದಿ ಅಂಬುಲೆನ್ಸ್ನಲ್ಲೇ ಹೆರಿಗೆ ಮಾಡಿಸಿದ್ದಾರೆ. ತಾಯಿ ಮಗು ಇಬ್ಬರನ್ನೂ ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂಬುಲನ್ಸ್ ನಲ್ಲಿಯೇ ಹೆರಿಗೆಯಾದ ಕುರಿತು ಸ್ಥಳೀಯರಲ್ಲಿ ಅಸಮಾಧಾನ ಮೂಡಿದೆ. ಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲದಿರುವುದು ಇಂಥ ಘಟನೆಗಳಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ">
ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ, ಗ್ರಾಮ ಪಂಚಾಯ್ತಿ ಜಾಗ ಕೊಟ್ಟರೂ ನಿರ್ಮಾಣವಾಗದ ಆಸ್ಪತ್ರೆ
Curated byHemanth kumar S|Vijaya Karnataka Web|26 May 2023
ಧಾರವಾಡ: ಹೆರಿಗೆಗೆಂದು ಹಳ್ಳಿಯಿಂದ ದೂರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಅಫ್ರೀನ್ಗೆ ಆಂಬುಲೆನ್ಸ್ನಲ್ಲೇ ಹೆರಿಗೆಯಾಗಿದೆ.ಮಹಿಳೆಗೆ ಹೆರಿಗೆ ನೋವು ಜೋರಾಗಿದ್ದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಅಶೋಕ ಪೂಜಾರ, ಬಸವರಾಜ ರಾಠೋಡ ಎಂಬ ಸಿಬ್ಬಂದಿ ಅಂಬುಲೆನ್ಸ್ನಲ್ಲೇ ಹೆರಿಗೆ ಮಾಡಿಸಿದ್ದಾರೆ. ತಾಯಿ ಮಗು ಇಬ್ಬರನ್ನೂ ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂಬುಲನ್ಸ್ ನಲ್ಲಿಯೇ ಹೆರಿಗೆಯಾದ ಕುರಿತು ಸ್ಥಳೀಯರಲ್ಲಿ ಅಸಮಾಧಾನ ಮೂಡಿದೆ. ಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲದಿರುವುದು ಇಂಥ ಘಟನೆಗಳಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.