ಬಿಜೆಪಿ ಸಿದ್ಧಾಂತದ ಬಗ್ಗೆ ಮಾತನಾಡಿದ್ರೆ ಬಿಜೆಪಿ ಪಕ್ಷದವರಾಗಲ್ಲ ; ಅರವಿಂದ್ ಬೆಲ್ಲದ
ಹುಬ್ಬಳ್ಳಿ: ಚೈತ್ರಾ ಕುಂದಾಪುರ ಬಿಜೆಪಿ ಪಕ್ಷದವರಲ್ಲ, ಅವರು ಬಿಜೆಪಿ ತತ್ವ ಸಿದ್ದಾಂತಗಳ ಬಗ್ಗೆ ಮಾತನಾಡಿದರೇ ಅವರು ಬಿಜೆಪಿ ಪಕ್ಷದವರಾಗಲ್ಲ, ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೈತ್ರಾ ಕುಂದಾಪುರ ಅಂತ ಜನ ಎಲ್ಲಾ ಪಕ್ಷದಲ್ಲಿ ಇರುತ್ತಾರೆ. ದುಡ್ಡು ಮಾಡೋದು, ಜನರಿಗೆ ಮೋಸ ಮಾಡೋದು ಅವರ ಕೆಲಸ. ಇದು ಮೊದಲ ಘಟನೆ ಅಲ್ಲ, ಮೋಸ ಹೋಗುವವರು ಇರುವರಿಗೂ ಇದು ಕೊನೆ ಆಗಲ್ಲ. ಈ ಬಗ್ಗೆ ನಮ್ಮ ಪಕ್ಷ ಮೊದಲೆ ತಿಳಿಸಿತ್ತು ಎಂದರು.
ಇನ್ನು ಎಲ್ಲಲ್ಲೊ ದುಡ್ಡು ಮಾಡಿದವರು, ಹೇಗೆ ರಾಜಕೀಯ ಮಾಡಬೇಕು ಅಂತ ಗೊತ್ತಿಲ್ಲದವರು ಈ ರೀತಿ ಮೋಸ ಹೋಗುತ್ತಾರೆ. ಇಂತಹ ಡಮ್ಮಿ ವ್ಯಕ್ತಿಗಳ ಜೊತೆಗೆ ಮೋಸ ಹೋಗುತ್ತಾರೆ. ಚೈತ್ರಾ ಕುಂದಾಪುರ ಬಿಜೆಪಿ ಪಕ್ಷದವರಲ್ಲ ಪಕ್ಷ ಸಿದ್ಧಾಂತದ ಬಗ್ಗೆ ಮಾತನಾಡಿದರೇ ತಕ್ಷಣ ಬಿಜೆಪಿಯವರಾಗಲ್ಲ. ಇವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಟಿಕೆಟ್ ಪಡೆಯಲು ಒಂದು ಪದ್ದತಿಯಿದೆ. ಯಾವ ರಾಜಕೀಯ ಪಕ್ಷಗಳು ಇಂತಹ ಟೋಪಿ ಹಾಕುವವರನ್ನು ಬೆಳೆಸುವುದಿಲ್ಲ. ಟಿಕೆಟ್ ಆಕಾಂಕ್ಷಿಗಳ ಅಡ್ವಾಂಟೆಜ್ ತೆಗೆದುಕೊಳ್ಳುವ ಜನ ಇವರು ಎಂದು ಹರಿಹಾಯ್ದರು. ಜಗದೀಶ್ ಶೆಟ್ಟರ್ ಈಗ ಕಾಂಗ್ರೆಸ್ ಸೇರಿದ್ದಾರೆ ಅವರು ಕಾಂಗ್ರೆಸ್ ಬಗ್ಗೆ ಯೋಚನೆ ಮಾಡೋದು ಒಳ್ಳೆಯದು. ಜಗದೀಶ್ ಶೆಟ್ಟರ್ ಮನಸ್ಸು ಇನ್ನೂ ಬಿಜೆಪಿಯಲ್ಲಿದೆ ಅನ್ನಸ್ತೆ. ಅವರ ಬಗ್ಗೆ ಹೆಚ್ಚಿಗೆ ಮಾತನಾಡಲು ಹೋಗಲ್ಲ. ಅದರ ಅವಶ್ಯಕತೆಯಿಲ್ಲ ಇಲ್ಲ ಎಂದರು.

Curated by Shivamoorthi M|TimesXP Kannada|18 Sept 2023