ಮನೆಯೊಡತಿಗಷ್ಟೇ ಯಾಕೆ ಹಣ ಕೊಡ್ತೀರಿ?, ಪುರುಷರಿಗೂ ಹಣ ಕೊಡಿ; ನಾವು ವೋಟ್ ಹಾಕಿದ್ದೇವೆ; ಪುರುಷರ ಡಿಮ್ಯಾಂಡ್
ಧಾರವಾಡ: ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳಲ್ಲಿ ಒಂದಾದ ಮನೆಯೊಡತಿಗೆ 2 ಸಾವಿರ ರೂಪಾಯಿ ಕೊಡುವ ಯೋಜನೆ ಅತ್ತೆಗೆ ನೀಡಬೇಕೋ ಅಥವಾ ಸೊಸೆಗೆ ನೀಡಬೇಕೋ ಎಂಬ ಗೊಂದಲ ಶುರುವಾದ ಬೆನ್ನಲ್ಲೇ ಕಾಂಗ್ರೆಸ್ಗೆ ಕೇವಲ ಮಹಿಳೆಯರಷ್ಟೇ ಅಲ್ಲ ಪುರುಷರೂ ಮತ ಹಾಕಿದ್ದಾರೆ. ಮನೆಯೊಡೆಯನಿಗೂ ಮಾಸಿಕ 2 ಸಾವಿರ ರೂಪಾಯಿ ಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಬಸ್ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪಾಸ್ ಅಂತಾ ಸರ್ಕಾರ ತಿಳಿಸಿದೆ. ಇದು ಮಹಿಳೆಯರಿಗೆ ಕೊಟ್ಟಂತಹ ದೊಡ್ಡ ಕೊಡುಗೆ. ಆದರೆ, ಮಹಿಳೆಯರು, ಪುರುಷರು ಮತ್ತು ಯುವಕರು ಸೇರಿ ಎಲ್ಲರೂ ಸಮಾನವಾಗಿ ಸರ್ಕಾರಕ್ಕೆ ವೋಟ್ ಮಾಡಿದ್ದೇವೆ. ಈಗ ಮಹಿಳೆಯರು, ಪುರುಷರು ಅಂತಾ ಏಕೆ ಭೇದ ಭಾವ ಮಾಡುತ್ತಿದ್ದೀರಿ. ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ ಎಂದು ಹೇಳುವ ಕಾಂಗ್ರೆಸ್ ಈಗ ಏಕೆ ಬೇರೆ ಬೇರೆಯಾಗಿ ನೋಡುತ್ತಿದ್ದೀರಿ. ಪುರುಷರಿಗೂ ಫ್ರೀ ಬಸ್ ಪಾಸ್ ಗ್ಯಾರಂಟಿ ಕೊಡಬೇಕು. ಇದಲ್ಲದೇ ಮನೆಯೊಡತಿಗೆ 2000 ರೂಪಾಯಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಮನೆ ನಡೆಸುವವರು ಮನೆಯ ಯಜಮಾನ. ಅವರಿಗೇಕೆ ಸರ್ಕಾರ 2 ಸಾವಿರ ರೂಪಾಯಿ ಕೊಡಬಾರದು? ಸರ್ಕಾರ ಭೇದ ಭಾವ ಮಾಡದೇ ಮನೆಯಲ್ಲಿ ಜಗಳ ಹಚ್ಚದೇ ಇಬ್ಬರಿಗೂ 2 ಸಾವಿರ ರೂಪಾಯಿ ಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
dharwadTimesXP KannadaUpdated: 1 Jun 2023, 8:34 pm - cities
- dharwad
- Extend Subsidy Scheme For Women To Men Too Dharwad Mens Demand