ಕುಂದಗೋಳ ತಾಲೂಕಿನ ಬೃಹತ್ ಹೋಬಳಿ ಸಂಶಿ ಗ್ರಾಮದಲ್ಲಿರುವ ಪಶು ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಕ ಮಾಡುವಂತೆ ಅಲ್ಲಿನ ರೈತರು ಹಾಗೂ ರೈತ ಸಂಘದವರು ಈ ಹಿಂದೆ ಪಶು ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟಿಸಿಲು ಮುಂದಾಗಿದ್ರೂ, ಅಂದು ವೈದ್ಯಕೀಯ ಸಿಬ್ಬಂದಿ ಆಶ್ವಾಸನೆ ಕೊಟ್ಟ ಪಶು ಆಸ್ಪತ್ರೆಯ ಅಧಿಕಾರಿಗಳು ಪುನಃ ಈಡೇರಿಸಿಲ್ಲ ಎಂದು ರೈತರು ಕಿಡಿಕಾರಿದ್ದಾರೆ.
ಈ ಕಾರಣ ಸಂಶಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಜಾನುವಾರುಗಳಿಗೆ ರೋಗ ರುಜಿನ ತಾಪತ್ರಯ ಹೆಚ್ಚುತ್ತಿದ್ದು, ಖಾಯಂ ವೈದ್ಯರನ್ನು ಆಸ್ಪತ್ರೆಗೆ ಒದಗಿಸುವಂತೆ ರೈತರು ಒತ್ತಾಯ ಮಾಡುತ್ತಿದ್ದು ಖಾಯಂ ವೈದ್ಯರು ಬಾರದಿದ್ದಲ್ಲಿ ಪುನಃ ಬೀಗ ಜಡಿಯುವ ಎಚ್ಚರಿಕೆ ನೀಡಿದ್ದಾರೆ. ">
ಜಾನುವಾರುಗಳಿಗೆ ರೋಗ ಬಂದು ಸಾಯ್ತಿವೆ, ಆಸ್ಪತ್ರೆ ಇದ್ದರೂ ವೈದ್ಯರಿಲ್ಲ; ರೈತರ ಕಿಡಿ
Curated by Shivamoorthi M|Vijaya Karnataka Web|25 May 2023
ಧಾರವಾಡ: ಇತ್ತಿಚೆಗಷ್ಟೇ ಜಾನುವಾರುಗಳಿಗೆ ವಕ್ಕರಿಸಿದ ಮಹಾಮಾರಿ ಚರ್ಮ ಗಂಟು ರೋಗ ರಾಸುಗಳ ಜೀವ ಹಿಂಡಿ ಹಿಪ್ಪೆ ಮಾಡಿ ತಣ್ಣಗಾದರೂ ಈ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ನಿರ್ಲಕ್ಷ್ಯಕ್ಕೆ ಜನ ಬೇಸತ್ತು ಹೋಗಿದ್ದಾರೆ.ಕುಂದಗೋಳ ತಾಲೂಕಿನ ಬೃಹತ್ ಹೋಬಳಿ ಸಂಶಿ ಗ್ರಾಮದಲ್ಲಿರುವ ಪಶು ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಕ ಮಾಡುವಂತೆ ಅಲ್ಲಿನ ರೈತರು ಹಾಗೂ ರೈತ ಸಂಘದವರು ಈ ಹಿಂದೆ ಪಶು ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟಿಸಿಲು ಮುಂದಾಗಿದ್ರೂ, ಅಂದು ವೈದ್ಯಕೀಯ ಸಿಬ್ಬಂದಿ ಆಶ್ವಾಸನೆ ಕೊಟ್ಟ ಪಶು ಆಸ್ಪತ್ರೆಯ ಅಧಿಕಾರಿಗಳು ಪುನಃ ಈಡೇರಿಸಿಲ್ಲ ಎಂದು ರೈತರು ಕಿಡಿಕಾರಿದ್ದಾರೆ.ಈ ಕಾರಣ ಸಂಶಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಜಾನುವಾರುಗಳಿಗೆ ರೋಗ ರುಜಿನ ತಾಪತ್ರಯ ಹೆಚ್ಚುತ್ತಿದ್ದು, ಖಾಯಂ ವೈದ್ಯರನ್ನು ಆಸ್ಪತ್ರೆಗೆ ಒದಗಿಸುವಂತೆ ರೈತರು ಒತ್ತಾಯ ಮಾಡುತ್ತಿದ್ದು ಖಾಯಂ ವೈದ್ಯರು ಬಾರದಿದ್ದಲ್ಲಿ ಪುನಃ ಬೀಗ ಜಡಿಯುವ ಎಚ್ಚರಿಕೆ ನೀಡಿದ್ದಾರೆ.