ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಶ್ರೀ ಗಜಾನನ ಉತ್ಸವ ಆಚರಣೆಗಾಗಿ ಪಾಲಿಕೆ ಆಯುಕ್ತರಿಗೆ ಮನವಿ
1332 views
dharwad ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ನಗರದ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ 11 ದಿನಗಳವರೆಗೆ ಶ್ರೀ ಗಜಾನನ ಉತ್ಸವ ಆಚರಣೆಗಾಗಿ ಅವಕಾಶ ನೀಡಬೇಕೆಂದು ಆಗ್ರಹಿಸಿ ನಗರದ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ವತಿಯಿಂದ ನಗರದ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಮಿತಿಯ ಸಂಚಾಲಕರಾದ ಹನುಮಂತಸಾ ನಿರಂಜನ, ನಗರದ ರಾಣಿ ಚೆನ್ನಮ್ಮ ಮೈದಾನ ಹು-ಧಾ ಪಾಲಿಕೆಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಕಳೆದಬಾರಿ ಹೋರಾಟ ಕೈಗೊಂಡ ಫಲವಾಗಿ ಅನುಮತಿ ದೊರಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಗೊಂದಲಕ್ಕೆ ಅವಕಾಶ ಮಾಡಬಾರದು. ಆದ್ದರಿಂದ ಗಣೇಶನ ಪ್ರತಿಷ್ಠಾಪನೆಗೆ 11 ದಿನಗಳವರೆಗೆ ಅವಕಾಶ ನೀಡಬೇಕು. ಹು-ಧಾ ಮಹಾನಗರ ಪಾಲಿಕೆ ನಮಗೆ 15 ದಿನಗಳ ಮುಂಚೆ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಗಜಾನನ ಉತ್ಸವ ನಿಮಿತ್ತವಾಗಿ ಸಾಂಸ್ಕೃತಿಕ ಮಂಟಪ ಹಾಗೂ ಶ್ರೀ ಗಜಾನನ ಮೂರ್ತಿ ಪ್ರತಿಷ್ಠಾಪನೆಗೆ ಮಂಟಪಗಳಿಗೆ ಪರವಾನಗಿ ನೀಡಬೇಕು. ತಾವು ವಿಧಿಸುವ ಷರತ್ತಿನ ಅನ್ವಯವಾಗಿ ನಾವು ಗಜಾನನ ಉತ್ಸವ ಆಚರಣೆಗೆ ನಾವು ಬದ್ಧರಾಗಿದ್ದೇವೆ. ಮೂರುಸಾವಿರಮಠದ ಸ್ವಾಮೀಜಿ ಹಾಗೂ ಉಳಿದ ಗಣೇಶ ಸಮಿತಿ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿ, ಗಜಾನನ ಉತ್ಸವದ ಕುರಿತಂತೆ ಪೂರ್ವಭಾವಿಯಾಗಿ ಚರ್ಚಿಸಲಾಗುವುದು ಎಂದರು.