ಹುಬ್ಬಳ್ಳಿ: ಹಲವು ಬೇಡಿಕೆ ಈಡೇರಿಸಲು ಅತಿಥಿ ಉಪನ್ಯಾಸಕರ ಸಂಘ ಆಗ್ರಹ
1069 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ‘ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿ ವಯೋಮಿತಿ ಹೆಚ್ಚಳ ಹಾಗೂ ವೇತನ ಬೇಡಿಕೆ ಬಿಡುಗಡೆ ಹಾಗೂ ಸೇವಾ ಭದ್ರತೆ ಘೋಷಿಸಬೇಕು’ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಧ್ಯಕ್ಷ ಹಣಮಂತಗೌಡ ಕಲ್ಮನಿ ಆಗ್ರಹಿಸಿದರು.
‘430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಸೇವಾ ಭದ್ರತೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ. ಆದರೆ, ಇದುವರೆಗೂ ಸೇವಾ ಭದ್ರತೆಯನ್ನು ಘೋಷಿಸಿಲ್ಲ. ಪರಿಣಾಮ, ನಮ್ಮ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಕೆಲವರ ವಯೋಮಿತಿ ಮೀರಿದೆ. ಸರ್ಕಾರವು ಇಂದಲ್ಲ ನಾಳೆ ನಮ್ಮನ್ನು ಕಾಯಂಗೊಳಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೇಳಿದರು.