ಚಂದ್ರಯಾನ-3 ನೌಕೆಯ ಯಾನ ಯಶಸ್ವಿಯಾಗಲು ವಿಘ್ನೇಶ್ವರಿಗೆ ಕಲಾವಿದನಿಂದ ಪೂಜೆ
2186 views
dharwad ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ಆಂಧ್ರ ಪ್ರದೇಶದ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3ರ ನೌಕೆಯು ಉಡಾವಣೆಯಾಗಿದೆ. ಈ ಯೋಜನೆಯ ಯಶಸ್ಸಿಗಾಗಿ ಕಲಾವಿದರೊಬ್ಬರು ನೌಕೆಯ ಮಾದರಿ ಸಿದ್ಧಪಡಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಲವತ್ತಕ್ಕೂ ಹೆಚ್ಚು ದಿನಗಳ ಈ ಚಂದ್ರಯಾನದಲ್ಲಿ ಯಾವುದೇ ರೀತಿಯ ವಿಘ್ನಗಳು ಉಂಟಾಗದಿರಲೆಂದು ಹತ್ತು ಇಂಚಿನ ಎಲ್ವಿಎಂ ವಾಹಕದ ಪ್ರತಿಕೃತಿ ತಯಾರಿಸಿ, ವಿಘ್ನನಿವಾರಕ ಗಣಪತಿಗೆ ಕಲಾವಿದ ಮಂಜುನಾಥ ಹಿರೇಮಠ ಪ್ರಾರ್ಥಿಸಿದ್ದಾರೆ. 2019ರಲ್ಲಿ ಚಂದ್ರಯಾನ-2ರಲ್ಲಿ ವಿಕ್ರಮ್ ಲ್ಯಾಂಡರ್ ಉಪಗ್ರಹ ಇನ್ನೇನು ಚಂದ್ರನ ಮೇಲೆ ಇಳಿಯುವ ಹಂತದಲ್ಲಿ ನಿಗದಿಯಂತೆ ಯೋಜನೆ ಪೂರ್ಣಗೊಳ್ಳಲಿಲ್ಲ. ಅದರಿಂದ ಎಲ್ಲ ಭಾರತೀಯರ ಮನಸ್ಸಿಗೂ ನೋವಾಗಿತ್ತು. ಈ ಬಾರಿ ಯಾವುದೇ ತೊಂದರೆ ಆಗದಿರಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಪಗ್ರಹ ಉಡಾವಣೆಗೊಂಡಿದ್ದು, ಇದರಲ್ಲಿರುವ ಲ್ಯಾಂಡರ್ ವಿಕ್ರಮ್ ಅನ್ನು ಆಗಸ್ಟ್ 23 ಅಥವಾ 24 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಸಬಹುದು. ಚಂದ್ರಯಾನ-3 ಉಪಗ್ರಹ ಉಡಾವಣೆಯೊಂದಿಗೆ ಭಾರತ ಚಂದ್ರನ ಕಡೆಗೆ ಮೂರನೇ ಹೆಜ್ಜೆ ಇಟ್ಟಿದೆ. ಇದರಲ್ಲಿ ಸಾಧಿಸಿದ ಯಶಸ್ಸು ಭಾರತಕ್ಕೆ ವಿಶ್ವದ ನಾಲ್ಕನೇ ಬಾಹ್ಯಾಕಾಶ ವಲಯದಲ್ಲಿ ಸೂಪರ್ ಪವರ್ ಸ್ಥಾನಮಾನವನ್ನು ನೀಡುತ್ತದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಉಪಗ್ರಹ ನೌಕೆಯನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿವೆ.