ಈ ನಡುವೆ ಮತ್ತೊಂದು ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಎಲ್ ಆ್ಯಂಡ್ ಟಿ ಮಾತ್ರವಲ್ಲದೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಕೂಡ ನೀರಿನ ವ್ಯವಸ್ಥೆ ಹಾಳಾಗಲು ಕಾರಣ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ನೀರು ಸರಬರಾಜು ಜಲಮಂಡಳಿಯಿಂದ ಎಲ್ ಆ್ಯಂಡ್ ಟಿ ಕಂಪನಿಯ ಕೈ ಸೇರಿದ್ದೇ ತಡ ಇವರೆಲ್ಲರೂ ಕೆಲಸ ಕಳೆದುಕೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸುಮಾರು 270 ಜನರು ಕೆಲಸ ಕಳೆದುಕೊಂಡಿದ್ದು, ಒಂದು ಕಡೆಯಾದರೇ ಮತ್ತೊಂದು ಕಡೆಯಲ್ಲಿ ಜನರು ನೀರಿಗಾಗಿ ಹೋರಾಟ ಮಾಡುವಂತ ಪ್ರಸಂಗ ಎದುರಾಗಿತ್ತು. ಆದರೆ ಈ ಸಿಬ್ಬಂದಿ ಹೇಳುವ ಮೂಲಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಕೂಡ ಅವಳಿನಗರದ ನೀರಿನ ಸರಬರಾಜು ಅವ್ಯವಸ್ಥೆಗೆ ಕಾರಣ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ">
ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಳಾಗಲು ಪಾಲಿಕೆ ಆಯುಕ್ತರೇ ಕಾರಣ; ಸಿಬ್ಬಂದಿ ಆರೋಪ
Curated by Shivamoorthi M|Vijaya Karnataka Web|25 May 2023
ಹುಬ್ಬಳ್ಳಿ: ಅವಳಿ ನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದೆ. ಜಲಮಂಡಳಿ ಹಾಗೂ ಎಲ್ ಆ್ಯಂಡ್ ಟಿಯ ಹಗ್ಗ ಜಗ್ಗಾಟದಲ್ಲಿ ಜನರು ಮಾತ್ರ ಹೈರಾಣಾಗಿದ್ದಂತೂ ಸತ್ಯ. ಈಗ ಅಧಿಕಾರಿಗಳು, ಸಚಿವರು ಎಲ್ ಆ್ಯಂಡ್ ಟಿಗೆ ಸಂಪೂರ್ಣ ಜವಾಬ್ದಾರಿ ವಹಿಸಿದ್ದು, ಕೂಡಲೇ ನೀರು ಸರಬರಾಜು ಮಾಡುವಂತೆ ತಾಕೀತು ಮಾಡಿದ್ದಾರೆ.ಈ ನಡುವೆ ಮತ್ತೊಂದು ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಎಲ್ ಆ್ಯಂಡ್ ಟಿ ಮಾತ್ರವಲ್ಲದೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಕೂಡ ನೀರಿನ ವ್ಯವಸ್ಥೆ ಹಾಳಾಗಲು ಕಾರಣ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ನೀರು ಸರಬರಾಜು ಜಲಮಂಡಳಿಯಿಂದ ಎಲ್ ಆ್ಯಂಡ್ ಟಿ ಕಂಪನಿಯ ಕೈ ಸೇರಿದ್ದೇ ತಡ ಇವರೆಲ್ಲರೂ ಕೆಲಸ ಕಳೆದುಕೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸುಮಾರು 270 ಜನರು ಕೆಲಸ ಕಳೆದುಕೊಂಡಿದ್ದು, ಒಂದು ಕಡೆಯಾದರೇ ಮತ್ತೊಂದು ಕಡೆಯಲ್ಲಿ ಜನರು ನೀರಿಗಾಗಿ ಹೋರಾಟ ಮಾಡುವಂತ ಪ್ರಸಂಗ ಎದುರಾಗಿತ್ತು. ಆದರೆ ಈ ಸಿಬ್ಬಂದಿ ಹೇಳುವ ಮೂಲಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಕೂಡ ಅವಳಿನಗರದ ನೀರಿನ ಸರಬರಾಜು ಅವ್ಯವಸ್ಥೆಗೆ ಕಾರಣ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.