ಪದೇ ಪದೇ ನನ್ನ ಹೆಸರು ಹೇಳಿದರೆ ಬಿಜೆಪಿ ಉದ್ಧಾರ ಆಗಲ್ಲ ; ಜಗದೀಶ್ ಶೆಟ್ಟರ್
ಹುಬ್ಬಳ್ಳಿ, : ಬಿಜೆಪಿಗೆ ನಾನು ಅಂದರೆ ಭಯ, ನಾನು ಪಕ್ಷ ಬಿಟ್ಟು ಹೋದ ಮೇಲೆ ಏನಾಗಿದೆ ಅನ್ನೋದು ಗೊತ್ತಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡದ ಅವರು, ನಾನು ಬಿಜೆಪಿ ಬಿಟ್ಟು ಬಂದಿರುವುದನ್ನು ಇನ್ನೂ ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗಿಲ್ಲ, ವಿಧಾನಸಭೆ ಚುನಾವಣೆಯಲ್ಲಿ ಟಾರ್ಗೆಟ್ ಮಾಡಿದ್ದೀರಿ. ಇವಾಗಲೂ ಟಾರ್ಗೆಟ್ ಯಾಕೆ?, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನನ್ನ ಭಯ ಆರಂಭವಾಗಿದೆ. ಭಯ ಇರುವ ಕಾರಣಕ್ಕೆ ಪದೇ ಪದೆ ನನ್ನ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ಇದರಿಂದ ಬಿಜೆಪಿಗೆ ನಷ್ಟ ಹೊರತು ಲಾಭ ಅಲ್ಲ. ಪದೇ ಪದೇ ಶೆಟ್ಟರ್ ಹೆಸರು ಹೇಳಿದರೆ ನೀವು ಉದ್ಧಾರವೂ ಆಗುವುದಿಲ್ಲ ಎಂದರು.
ಈದ್ಗಾ ಮೈದಾನದಲ್ಲಿ ಗಣೇಶ ಆಚರಣೆ ಮಾಡಿ, ಯಾರು ಬೇಡಾ ಅಂತಾರೆ, ನಾನು ಪ್ರತಿ ವರ್ಷ ಮನೆಯಲ್ಲಿ ಗಣೇಶ ಕೂರಿಸುತ್ತೇನೆ. ಕೆಲವರು ಮನೆಯಲ್ಲಿ ಗಣೇಶ ಕೂರಿಸಲ್ಲ. ತೋರಿಕೆಗೆ ಮಾಡುತ್ತಾರೆ ಎಂದರು. ಮಹಾದಾಯಿ ಬಗ್ಗೆ ಹೋರಾಟ ಮಾಡಿ, ಮೋದಿ ಬಂದು ಒಂಬತ್ತು ವರ್ಷ ಆಯ್ತು. ಹನಿ ನೀರು ಕೊಡಲು ಇಷ್ಟು ವರ್ಷ ಬೇಕಾ ಎಂದು ಪ್ರಶ್ನಿಸಿದರು, ಮಹದಾಯಿ ನೀರು ಕೊಡಿ. ನಿಮ್ಮ ಜನ್ಮ ಸಾರ್ಥಕ ಆಗತ್ತದೆ ಎಂದರು. ಅಲ್ಲದೆ, ಪ್ರತಿ ವರ್ಷ ಕಳಸಾ ಬಂಡೂರಿ ಹೆಸರಲ್ಲಿ ವೋಟ್ ತೆಗೆದುಕೊಳ್ಳುವುದಾ? ಮೋದಿ ಅವರಿದ್ದಾಗಲೇ ಕಳಸಾ ಬಂಡೂರಿ ಮುಕ್ತಾಯ ಮಾಡಿ ಎಂದರು.
ಹಣಕೊಟ್ಟು ಟಿಕೆಟ್ ಕೊಟ್ಟಿರುವ ಬಗ್ಗೆ ಬಿಜೆಪಿ ಉತ್ತರಿಸಬೇಕು, ಹಣ ಪಡೆದು ಬಿಜೆಪಿ ಟಿಕೆಟ್ ಕೊಟ್ಟಿರುವ ಬಗ್ಗೆ ಊಹಾಪೋಹ ಇದೆ. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದರು. ಹಣ ಪಡೆದ ಬಗ್ಗೆ ಕೆಲವು ಕಡೆ ಸುದ್ದಿ ಹೊರಗೆ ಬರುತ್ತಿವೆ, ಇನ್ನೂ ಕೆಲವೆಡೆ ಹೊರಗೆ ಬರುತ್ತಿಲ್ಲ. ಟಿಕೆಟ್ ಕೊಡಿಸಲು ಇಂಥದ್ದೊಂದು ಟೀಮ್ ರೆಡಿಯಾಗಿದೆ ಅಂದರೆ ಇದನ್ನು ಗಂಭೀರವಾಗಿ ವಿಚಾರ ಮಾಡಬೇಕು. ಮಾಹಿತಿ ಪ್ರಕಾರ ಹಿಂದೂ ಕಾರ್ಯಕರ್ತರೇ ಪ್ರಕರಣದಲ್ಲಿದ್ದಾರೆ. ಕನಕಗಿರಿಯಲ್ಲಿ ಟಿಕೆಟ್ ಡೀಲ್ ವಿಷಯಕ್ಕೆ ದೂರು ದಾಖಲಾಗಿದೆ. ದೂರು ಕೊಡದೆ ಇರುವವರು ಇನ್ನೂ ಸಾಕಷ್ಟು ಜನ ಇರಬಹುದು ಎಂದರು.

Curated by Shivamoorthi M|TimesXP Kannada|18 Sept 2023