Karnataka assembly elections 2023: ವಿನಯ್ ಕುಲಕರ್ಣಿ ವೋಟ್ ಮಾಡಲು ಬಂದಿಲ್ಲ, ತುಂಬಾ ಮಿಸ್ ಮಾಡ್ಕೋತಿದಿವಿ: ಶಿವಲೀಲಾ ಕುಲಕರ್ಣಿ
1031 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪತ್ನಿ ಹಾಗೂ ಮಕ್ಕಳು ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಮತ ಚಲಾವಣೆ ಮಾಡಿದ್ದಾರೆ.
ವಿನಯ್ ಕುಲಕರ್ಣಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಆದರೆ, ಅವರ ಮತ ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಇದ್ದು, ಇಂದು ಶಿವಲೀಲಾ ಕುಲಕರ್ಣಿಯವರು ತಮ್ಮ ಮಕ್ಕಳಾದ ವೈಶಾಲಿ, ದೀಪಾಲಿ ಹಾಗೂ ಹೇಮಂತ ಅವರೊಂದಿಗೆ ಧಾರವಾಡದ ಶಾರದಾ ಸ್ಕೂಲ್ಗೆ ಬಂದು ಮತ ಹಾಕಿದ್ದಾರೆ. ನನ್ನ ಮೂರು ಮಕ್ಕಳ ಜೊತೆ ಬಂದು ಮತದಾನ ಮಾಡಿದ್ದಾನೆ ತುಂಬಾ ಖುಷಿ ಆಗ್ತಿದೆ. ನನ್ನ ಮಗನ ಮೊದಲ ಬಾರಿಗೆ ಮತದಾನ ಮಾಡಿದ್ದಾನೆ. ನಮ್ಮ ಟೀಂ ವರ್ಕ್ ತುಂಬಾ ಸಕ್ಸಸ್ ಆಗಿದೆ. ಎಲ್ಲೂ ಏನೂ ತೊಂದರೆ ಆಗಿಲ್ಲ. ವಿನಯ್ ಕುಲಕರ್ಣಿ ಇಲ್ಲದೇ ಇರುವುದು ತುಂಬಾ ಬೇಸರ ತರಿಸಿದೆ. ಮತದಾರರಿಗೆ ತೊಂದರೆ ಆಗಬಾರದು ಎಂದು ಅವರು ಬಂದಿಲ್ಲ, ಆನ್ಲೈನ್ ಮೂಲಕವೇ ವೋಟ್ ಮಾಡಬಹುದು ಎಂದು ಹೇಳಿದರು.