ಮಂಡಿಹಾಳ ಗ್ರಾಮದಲ್ಲಿ ದ್ಯಾಮವ್ವ, ದುರ್ಗಾದೇವಿಯರ ಜಾತ್ರಾ ಮಹೋತ್ಸವ
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
ಧಾರವಾಡ: ಜಾತ್ರೆಗಳಂದರೇ ಏನೋ ಒಂಥರ ವಿಶಿಷ್ಟ ಅಚರಣೆಗಳೇ ಇರುತ್ತವೆ. ಒಂದೊಂದು ಜಾತ್ರೆಯಲ್ಲಿ ಒಂದೊಂದು ತೆರನಾದ ಆಚರಣೆ. ಈ ಆಚರಣೆಗೆ ಇಲ್ಲಿನ ಜಾತ್ರೆಯಲ್ಲಿ ಭಂಡಾರ ತೂರಿ ಹರಕೆ ತೀರಿಸೋದು ನಡೆದು ಬಂದ ಸಂಪ್ರದಾಯ. ಧಾರವಾಡ ತಾಲೂಕಿನ ಮಂಡಿಹಾಳ ಗ್ರಾಮದಲ್ಲಿ ಗ್ರಾಮ ದೇವತೆಯರಾದ ದ್ಯಾಮವ್ವ ಹಾಗೂ ದುರ್ಗಾದೇವಿಯರ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ನಡೆಯುತ್ತಿದೆ. ಮಂಡಿಹಾಳ ಗ್ರಾಮದ ಪ್ರತಿಯೊಂದು ಗ್ರಾಮದಲ್ಲಿ ಗ್ರಾಮ ದೇವಿಯರ ಮೂರ್ತಿ ಮೆರವಣಿಗೆ ನಡೆಯುತ್ತಿದ್ದು, ಗ್ರಾಮಸ್ಥರು ಸಂಭ್ರಮದಿಂದ ಹೊನ್ನಾಟವಾಡುತ್ತಿದ್ದಾರೆ.