ಗಗನಕ್ಕೇರಿದ ಮಾವಿನ ಹಣ್ಣಿನ ಬೆಲೆ; ಕೆಜಿ 800 ರಿಂದ 900 ರೂಪಾಯಿ!
1049 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಧಾರವಾಡ: ಮಾವಿನ ಹಣ್ಣಿನ ಬೆಲೆ ಗಗನಕ್ಕೇರಿದ್ದು ಜನರು ಕಂಗಾಲಾಗಿದ್ದಾರೆ. ದುಬಾರಿ ಬೆಲೆಯಿಂದಾಗಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಮಾವಿನ ಹಣ್ಣುಗಳು ಕಳೆದೊಂದು ವಾರದಿಂದ ನಗರದ ಮಾರುಕಟ್ಟೆಗೆ ಬರುತ್ತಿವೆ. ಮಾವಿನ ಹಣ್ಣಿಗೆ ಸದ್ಯ ಕೆ.ಜಿಗೆ 800ರಿಂದ 900ರವರೆಗೆ ದರ ಇದೆ. ಸಿಂಧೂರ ತಳಿಯ ಮಾವಿನ ಹಣ್ಣಿಗೆ, ಕೆ.ಜಿಗೆ 400ರಿಂದ 450ವರೆಗೆ ಬೆಲೆ ಇದೆ. ಒಂದು ಡಜನ್ ಅಪೂಸ್ ಹಣ್ಣಿಗೆ ಚಿಲ್ಲರೆ ವ್ಯಾಪಾರಿಗಳು 600ರಿಂದ 800 ದರ ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್ ತಿಂಗಳ ಆರಂಭದಲ್ಲಿ ಮಾರುಕಟ್ಟೆಗೆ ಬರುವ ಮಾವು, ಈ ಬಾರಿ ಮಾರ್ಚ್ ಅಂತ್ಯದಲ್ಲೇ ಪ್ರಾರಂಭದಲ್ಲೇ ಮಾರುಕಟ್ಟೆಗೆ ಬಂದಿದೆ. ಮಳೆ ಕೊರತೆಯಿಂದಾಗಿ ಇಳುವರಿಯೂ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಮಾವಿನ ಹಣ್ಣುಗಳ ಗಾತ್ರ ಕಡಿಮೆಯಾಗಿದೆ.