ಲಿಂಗಸೂರು ಮಕ್ಕಳಿಬ್ಬರ ಸಾಧನೆಗೆ ವಿಶ್ವದಾಖಲೆಗಳ ಸರಮಾಲೆ, ಇವರ ಜ್ಞಾನ ಬಂಡಾರದಲ್ಲಿ ಸಾವಿರಾರು ಪ್ರಶ್ನೋತ್ತರಗಳು
1127 views
dharwad ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ಹೀಗೆ ಹತ್ತು ಹಲವು ರಂಗಗಳ ಪ್ರಶ್ನೆಗಳಿಗೆ ಹರಳು ಹುರಿದಂತೆ ಉತ್ತರ ಕೊಡುವ ಈ ಮುದ್ದು ಮಕ್ಕಳು ಹಲವು ದಾಖಲೆಗಳನ್ನು ಮಾಡಿದ್ದಾರೆ. ಇವರು ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಮುದಗಲ್ ಪಟ್ಟಣದ ಅಪ್ಪು ವಿದ್ಯಾಧಾಮದ ವಿದ್ಯಾರ್ಥಿಗಳು.
ತಮ್ಮಲ್ಲಿರುವ ಸಾಮಾನ್ಯಜ್ಞಾನದ ಬಂಡಾರವನ್ನು ಶಿವರಾಜ ಹಾಗೂ ಸಂಜನಾ ವಿದ್ಯಾರ್ಥಿಗಳು ಹಲವು ವೇದಿಕೆಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ. 20 ವರ್ಲ್ಡ್ ರೆಕಾರ್ಡ್ಗಳು, ಎರಡು ಏಷ್ಯನ್ ಬುಕ್ ಆಫ್ ರೆಕಾರ್ಡ್, ನಾಲ್ಕು ಇಂಡಿಯಾ ಬುಕ್ ಆಫ್ ರೆಕಾರ್ಡ್, ಕರ್ನಾಟಕ ಬುಕ್ ಆಫ್ ರೆಕಾರ್ಡ್, ಅಮೆರಿಕಾ ಸಂಸ್ಥೆಯಿಂದ ವರ್ಲ್ಡ್ ಟ್ಯಾಲೆಂಟ್ ಅವಾರ್ಡ್ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಗಳಿಸುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಈಗ ಗಿನ್ನಿಸ್ ದಾಖಲೆಯತ್ತ ದಾಪುಗಾಲು ಹಾಕುತ್ತಿದ್ದಾರೆ. ಇಂತಹ ಪ್ರತಿಭೆಗಳಿಗೆ ಪೋಷಣೆ ನೀಡುತ್ತಿರುವುದು ಒಬ್ಬ ಬಡ ಶಿಕ್ಷಕ. ಡಾ.ಮಹಾಂತೇಶ ಛಲವಾದಿ ತಮ್ಮ ಸ್ವಂತ ಖರ್ಚಿನಲ್ಲಿಯೇ ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದು, ಸುಮಾರು 168 ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗಿ ಶಿಕ್ಷಣ ನೀಡುತ್ತಿದ್ದಾರೆ.
ಇನ್ನೂ ಈ ವಿದ್ಯಾರ್ಥಿಗಳು ಸುಮಾರು ಅರವತ್ತು ಸಾವಿರಕ್ಕೂ ಅಧಿಕ ಪ್ರಶ್ನೋತ್ತರಗಳಿಗೆ ನಿರರ್ಗಳವಾಗಿ ಉತ್ತರ ನೀಡುತ್ತಾರೆ. ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ, ವಿಜ್ಞಾನ, ತಂತ್ರಜ್ಞಾನ ಹೀಗೆ ಹಲವು ರಂಗಗಳಲ್ಲಿ ಬಹಳಷ್ಟು ಜ್ಞಾನ ಸಂಪಾದಿಸಿದ್ದಾರೆ. ಸುಮಾರು ಹದಿನೈದು ಗಂಟೆಗೂ ಅಧಿಕ ಸಮಯ ವಿದ್ಯಾಭ್ಯಾಸ ಮಾಡುವ ಈ ಮಕ್ಕಳು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅವರ ಸಾಧನೆಯ ಬಗ್ಗೆ ಮಕ್ಕಳೇ ಹೇಳಿಕೊಂಡಿದ್ದಾರೆ.