ಗ್ರಾಮದೇವತೆಯ ದೇವಸ್ಥಾನದಿಂದ ದೇವತೆಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ನೃತ್ಯ ಎಲ್ಲರ ಗಮನ ಸೆಳೆಯಿತು. ಕೊರೊನಾ ಹಾವಳಿಯಿಂದ ಸರಳವಾಗಿ ಆಚರಣೆಯಾಗುತ್ತಿದ್ದ ಜಾತ್ರೆ, ಇದೀಗ ಅದ್ದೂರಿಯಾಗಿ ನಡೆದಿದೆ. ಮೆರವಣಿಗೆ ಉದ್ದಕ್ಕೂ ಭಕ್ತರು ಭಂಡಾರದೋಳಿಯಲ್ಲಿ ಮಿಂದೆದ್ದರು.. ">
ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ದ್ಯಾಮವ್ವ, ದುರ್ಗವ್ವ ದೇವತೆಗಳ ಪ್ರತಿಷ್ಠಾಪನೆ
Curated by Shivamoorthi M|Vijaya Karnataka Web|25 May 2023
ಧಾರವಾಡ: ನವಲಗುಂದ ಪಟ್ಟಣದಲ್ಲಿ ಗುರುವಾರ ಗ್ರಾಮದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗವ್ವ ದೇವತೆಗಳ ಪ್ರಾಣ ಪ್ರತಿಷ್ಠಾಪನೆಯನ್ನು ವೈದಿಕ ಹುಬ್ಬಳ್ಳಿಯ ಬ್ರಹ್ಮಶ್ರೀ ವಿದ್ಯಾಶಂಕರ ಶರ್ಮಾ, ನಾಗಲಿಂಗ ಮಠದ ಬ್ರಹ್ಮಶ್ರೀ ಸಿದ್ದಯ್ಯ ಸ್ವಾಮೀಗಳು ಹಾಗೂ ಸಂಗಡಿಗರ ನೇತ್ರತ್ವದಲ್ಲಿ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಕುಂಭ ಮೇಳದಲ್ಲಿ ಭಾಗಿಯಾಗಿದ್ದರು. ದೇವತೆಗಳ ಭವ್ಯ ಮೆರವಣಿಗೆಯಲ್ಲಿ ತಾಲೂಕಿನ ಸಾವಿರಾರು ಭಕ್ತರು ಸಾಕ್ಷಿಯಾದರು.ಗ್ರಾಮದೇವತೆಯ ದೇವಸ್ಥಾನದಿಂದ ದೇವತೆಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ನೃತ್ಯ ಎಲ್ಲರ ಗಮನ ಸೆಳೆಯಿತು. ಕೊರೊನಾ ಹಾವಳಿಯಿಂದ ಸರಳವಾಗಿ ಆಚರಣೆಯಾಗುತ್ತಿದ್ದ ಜಾತ್ರೆ, ಇದೀಗ ಅದ್ದೂರಿಯಾಗಿ ನಡೆದಿದೆ. ಮೆರವಣಿಗೆ ಉದ್ದಕ್ಕೂ ಭಕ್ತರು ಭಂಡಾರದೋಳಿಯಲ್ಲಿ ಮಿಂದೆದ್ದರು..