ಸಂಘ ಪರಿವಾರ, ಬಿಜೆಪಿಯವರ ಮೇಲೆ ಹುಡುಕಿ ಹುಡುಕಿ ಕೇಸ್ ಹಾಕಲಾಗ್ತಿದೆ ; ಕೋಟ ಶ್ರೀನಿವಾಸ್
ಕಲಬುರಗಿ: ರಾಜ್ಯದಲ್ಲಿ ತೀವ್ರ ಬರವಿದೆ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರ ಬರೋದಕ್ಕೂ ಕೇಂದ್ರ ಸರ್ಕಾರ ಕಾರಣ ಅನ್ನೋ ಮನಸ್ಥಿತಿಯಲ್ಲಿದ್ದಾರೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ್ರೆ ಮಾತ್ರ ಬರಪರಿಹಾರ ಕೆಲಸ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಕಾಗದ ಬರೆಯೋ ಸರ್ಕಾರ ಅಲ್ಲ ಅಂತ ಜನ ಅಂದುಕೊಂಡಿದ್ದರು. ಆದರೆ ಆ ಭರವಸೆಯನ್ನು ಸಿದ್ದರಾಮಯ್ಯ ಸುಳ್ಳು ಮಾಡಿದ್ದಾರೆ. ಲೋಕಸಭಾ ಚುನಾವಣೆವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರಿಯೋ ವಿಶ್ವಾಸವಿಲ್ಲ ಎಂದು ಹರಿಹಾಯ್ದರು.
ಶಕ್ತಿ ಯೋಜನೆಗಳಿಗೆ ಖಜಾನೆಯಿಂದ ಒಂದು ರೂಪಾಯಿ ಹಣ ನೀಡಿಲ್ಲ. ಬದಲಾಗಿ ಎಸ್ಸಿ ಎಸ್ಟಿ ಜನರಿಗೆ ಮೀಸಲಾಗಿದ್ದ ಹಣವನ್ನು ಶಕ್ತಿ ಯೋಜನೆಗೆ ಬಳಸಲಾಗಿದೆ. ರಾಜ್ಯದಲ್ಲಿ ಶಾಸಕರು ನೂರು ದಿನದಲ್ಲಿ ನೂರು ಮೀಟರ್ ರಸ್ತೆ ಮಾಡಲು ಆಗಿಲ್ಲ. ವಿಧಾನಸೌಧಕ್ಕೆ ಮಂತ್ರಿಗಳು ಬರ್ತಿಲ್ಲ, ಸರ್ಕಾರದ ಒಂದೇ ಒಂದು ಸಾಧನೆ ಅಂದ್ರೆ ಅದು ವರ್ಗಾವಣೆ ದಂಧೆ ಎಂದು ಆರೋಪಿಸಿದರು.
ಸಂಘ ಪರಿವಾರ ಮತ್ತು ಬಿಜೆಪಿಯವರ ಮೇಲೆ ಹುಡುಕಿ ಹುಡುಕಿ ಕೇಸ್ ಹಾಕಲಾಗುತ್ತಿದೆ. ಚೈತ್ರಾ ಕುಂದಾಪುರ ಪ್ರಕರಣ ಬಗ್ಗೆ ಬಿಜೆಪಿಯವರು ಜಾರುವುದು ಇಲ್ಲ, ಹಾರುವುದು ಇಲ್ಲ. ಮೋಸಕ್ಕೆ ಒಳಗಾಗೋರು ಜಾಗೃತರಾಗಬೇಕು ಹಣ ಕೊಟ್ಟವರು, ತೆಗೆದುಕೊಂಡವರ ಬಗ್ಗೆ ಕ್ರಮವಾಗಲಿ ಎಂದರು.
ಪ್ರಧಾನಿ ಸಮಯ ನೀಡ್ತಿಲ್ಲ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಸಮಯ ಕೇಳಿದ್ರೆ ಸಮಯ ಕೊಡದೆ ಇರೋ ಸಾಧ್ಯತೆ ಇಲ್ಲ. ಮೊನ್ನೆಯಷ್ಟೇ ಭೇಟಿ ಮಾಡಿ ಬಂದಿದ್ದಾರೆ, ವಿನಾಕಾರಣ ಅಪಪ್ರಚಾರ ಮಾಡೋದು ಸಿಎಂಗೆ ಶೋಭೆ ತರಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.

Curated by Shivamoorthi M|TimesXP Kannada|18 Sept 2023