ದೇಗುಲದಲ್ಲಿ ಆಣೆ ಮಾಡೋದೆಲ್ಲ ಬೇಡ, ಸೀದಾ ಕೋರ್ಟ್ಗೆ ಹೋಗೋಣ ಬನ್ನಿ ; ಪ್ರಿಯಾಂಕ್ ಖರ್ಗೆ ಸವಾಲ್
1545 views
kalaburagi ವಿಡಿಯೋಗಳಿಗೆ ಚಂದಾದಾರರಾಗಿಕಲಬುರಗಿ :ಬಿಜೆಪಿ- ಕಾಂಗ್ರೆಸ್ ವಿರುದ್ಧ ಕಮಿಷನ್ ಕಾಳ ತಾರಕಕ್ಕೇರಿದೆ, ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದ್ದಾರೆ. ಬಿಜೆಪಿಯವರೇ ದೇವಸ್ಥಾನಕ್ಕೆ ಯಾಕೆ ಹೋಗ್ತೀರಾ, ದೇವಸ್ಥಾನಕ್ಕೆ ಹೋದ್ರೆ ನ್ಯಾಯ ಸಿಗುತ್ತಾ, ಸಂವಿಧಾನ ಇದೆ ಕೋರ್ಟ್ ಇದೆ ಸಾಕ್ಷಿ ಸಮೇತ ಬನ್ನಿ ಎಂದು ಸಚಿವ ಪ್ರೀಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಅಜ್ಜಯ್ಯನ ಮೇಲೆ ಡಿಕೆಶಿ ಆಣೆ ಮಾಡಲಿ ಎಂದಿದ್ದ ಅಶ್ವತ್ಥ್ ನಾರಾಯಣ್ಗೆ ಟಾಂಗ್ ಕೊಟ್ಟಿದ್ದಾರೆ. ದೇವಸ್ಥಾನಕ್ಕೆ ಯಾಕೆ ಹೋಗ್ತೀರಾ ದೇವಸ್ಥಾನಕ್ಕೆ ಹೋದ್ರೆ ನ್ಯಾಯ ಸಿಗುತ್ತಾ..? ದೇವಸ್ಥಾನಕ್ಕೆ ಹೋದ್ರೆ ಜನರಿಗೆ ನೆಮ್ಮದಿ ಸಿಗುತ್ತೆ. ಸಂವಿಧಾನ ಇದೆ ಕೋರ್ಟ್ ಇದೆ ಬನ್ನಿ ಸಾಕ್ಷಿ ಇಟ್ಟು ಮಾತಾಡಿ. ನಾವು ಈ ಹಿಂದೆ ಪಿಎಸ್ ಐ ಹಗರಣದಲ್ಲಿ ಸಾಕ್ಷಿ ಇಟ್ಟು ಮಾತಾಡಿಲ್ವಾ. ಕೆಂಪಣ್ಣನವರು ಹೇಳಿದ್ದು ನಮಗೆ ಬಿಲ್ ವಿಳಂಬ ಆಗ್ತಿದೆ ಅಂತ ಅಷ್ಟೆ, ಬಿಜೆಪಿಯವರು ಸುಮ್ ಸುಮ್ನೆ ಏನೇನೋ ಮಾತಾಡ್ತಾರೆ ಎಂದು ಪ್ರೀಯಾಂಕ್ ಖರ್ಗೆ ಗುಡುಗಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಅಥವಾ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಬೇಕೆಂಬುದು ಬಹಳ ದಿನದಿಂದ ಇಲ್ಲಿನ ಜನರ ಕೂಗಿದೆ. ಈ ನಿಟ್ಟಿನಲ್ಲಿ ಪ್ರದೇಶದ ಚುನಾಯಿತ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.
ಇತ್ತೀಚೆಗೆ ಚಿತ್ರದುರ್ಗ, ಮೊನ್ನೆ ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿರುವ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಆರ್.ಡಿ.ಪಿ.ಆರ್. ಇಲಾಖೆಯಿಂದ ಆರ್.ಓ.ಪ್ಲ್ಯಾಂಟ್ ಸೇರಿದಂತೆ ಇತರೆ ನೀರು ಕುಡಿಯಲು ಯೋಗ್ಯ ಇರುವ ಕುರಿತು ಅಧ್ಯಯನಕ್ಕೆ "ವಾಟರ್ ಆಡಿಟ್ ಕಮಿಟಿ" ರಚಿಸಲಾಗುವುದು. ಈ ತಂಡವು ಅಧ್ಯಯನ ನಡೆಸಿ ಒಂದು ತಿಂಗಳ ಒಳಗಾಗಿ ವರದಿ ನೀಡಲಿದೆ. ನಂತರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಜಲ್ ಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಕಡೆ ಕಾಮಗಾರಿ ಕಳಪೆಯಾಗಿಲ್ಲ. ಕೆಲವು ಕಡೆ ಆಗಿದ್ದು, ಮೂರನೇ ತಂಡದಿಂದ ತನಿಖೆ ಮಾಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.