ಗ್ಯಾರಂಟಿಯಿಂದ ಯಾವ ಕೆಲಸಗಳು ಆಗುತ್ತಿಲ್ಲ; ಜನರ ಮುಂದೆ ಕಾಂಗ್ರೆಸ್ ಶಾಸಕರ ಅಳಲು!
ಕಲಬುರಗಿ ವಿಡಿಯೋಗಳಿಗೆ ಚಂದಾದಾರರಾಗಿ
ಕಲಬುರಗಿ: ನಾನು ಅಭಿವೃದ್ಧಿಯ ಆಸೆ ಇಟ್ಟುಕೊಂಡು ಬಂದಿದ್ದೆ. ಐದು ಗ್ಯಾರೆಂಟಿಗಳಿಂದ 65,000 ಕೋಟಿ ಹಣ ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದೇವೆ. ನಮ್ಮ ಹಣೆಯ ಬರಹ ಜನರಿಂದ ಬೈಸಿಕೊಳ್ಳುವುದು ಬಂದಿದೆ. ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಜನರ ಮುಂದೆ ಅಳಲು ತೊಡಿಕೊಂಡಿದ್ದಾರೆ.
ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕರಿಗೆ ಮೂಲಭೂತ ಸೌಕರ್ಯಕ್ಕಾಗಿ ಮನವಿ ಮಾಡಿದ ಜಾಧವ್ ಮತ್ತು ಮಹಾಲಕ್ಷ್ಮಿ ಲೇಔಟ್ ಜನರಿಗೆ ಶಾಸಕರು ಈ ರೀತಿಯ ಬೇಸರದ ಉತ್ತರ ನೀಡಿದ್ದಾರೆ. ಏನೋ ಕೆಲಸ ಮಾಡಬೇಕು ಅಂದ್ರೆ ಎಲ್ಲಾ ಗ್ಯಾರಂಟಿಗೆ ಹೋಗುತ್ತಿದೆ. ಒಬ್ಬ ಶಾಸಕನಿಗೆ 9 ಕೋಟಿ ರೂಪಾಯಿ ದುಡ್ಡು ಬರುತ್ತೆ. 38 ಹಳ್ಳಿ ಮತ್ತು 23 ವಾರ್ಡ್ ಗಳಿಗೆ ಹಂಚಬೇಕು. ಒಂದು ಹಳ್ಳಿ ಹಾಗೂ ಒಂದು ವಾರ್ಡ್ ಗಳಿಗೆ 20 ಲಕ್ಷ ಬರುತ್ತೆ. ಆದರೆ ಗ್ಯಾರಂಟಿ ಇಂದ ಯಾವ ಕೆಲಸಗಳು ಆಗುತ್ತಿಲ್ಲ ಎಂದು ಜನತೆಗೆ ಮುಂದೆ ನೋವು ಹಂಚಿಕೊಂಡಿದ್ದಾರೆ.