ಕಲಬುರಗಿಯಲ್ಲಿ 43 ಡಿಗ್ರಿಗೂ ಅಧಿಕ ತಾಪಮಾನ, ಜನ ಸುಸ್ತು
1077 views
ಕಲಬುರಗಿ ವಿಡಿಯೋಗಳಿಗೆ ಚಂದಾದಾರರಾಗಿಕಲಬುರಗಿ: ಕಲಬುರಗಿ ಎಂದಾಕ್ಷಣ ಥಟ್ಟನೇ ನೆನಪಾಗೋದು ರಣಬಿಸಿಲು. ರಾಜ್ಯದಲ್ಲೆ ಅತ್ಯಧಿಕ ತಾಪಮಾನ ದಾಖಲಾಗೋ ಈ ಜಿಲ್ಲೆಯಲ್ಲಿ ಇದೀಗ ರಣಬಿಸಿಲಿನ ಹೊಡೆತಕ್ಕೆ ಸಾರ್ವಜನಿಕರು ಅಕ್ಷರಶಃ ತತ್ತರಿಸಿ ಹೋಗ್ತಿದಾರೆ. ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಿಸಿಲಿನ ಝಳ ಕುದಿಯುತ್ತಿದ್ದು, ಜನಜೀವನ ಮತ್ತು ಜಾನುವಾರುಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರುತ್ತಿದ್ದರೆ, ಇತ್ತ ತಾಪಮಾನದಿಂದ ತಂಪಾಗಲು ಸಾರ್ವಜನಿಕರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ, ರಾಯಚೂರು, ಕಲಬುರಗಿ, ಕೊಪ್ಪಳ ಜಿಲ್ಲೆಗಳಲ್ಲಿ ತಾಪಮಾನ ಕಳೆದ ಎರಡು ಮೂರು ದಶಕಗಳಿಗಿಂತಲೂ ಅಧಿಕ ದಾಖಲಾಗುತ್ತಿದ್ದು, ಕಳೆದ ನಾಲ್ಕೈದು ದಿನಗಳಲ್ಲಿ ದಿನಿನಿತ್ಯ ಸರಾಸರಿ 43 ಡಿಗ್ರಿಯಿಂದ 45 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ದಾಖಲಾಗ್ತಿದೆ. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ಉಷ್ಣಾಂಶ ಪ್ರಮಾಣ ಹೆಚ್ಚಾಗುವುದು ಸಾಮಾನ್ಯ, ಈ ಬಾರಿ ಮೇ ತಿಂಗಳು ಅಂತ್ಯಕ್ಕೆ ಬಿಸಿಲಿನ ತೀವ್ರತೆ ಮಿತಿ ಮೀರಿದೆ.