ಕಲಬುರಗಿಯಲ್ಲಿ ಕಾರ್ಯಾಚರಿಸುತ್ತಿದೆ ಹೆಲ್ತ್ ಎಟಿಎಂ, ಹತ್ತೇ ನಿಮಿಷದಲ್ಲಿ ಬರುತ್ತೆ ಆರೋಗ್ಯದ ರಿಪೋರ್ಟ್
1108 views
kalaburagi ವಿಡಿಯೋಗಳಿಗೆ ಚಂದಾದಾರರಾಗಿಕಲಬುರಗಿ: ಎಟಿಎಂ ಮಷಿನ್ಗಳ ಮೂಲಕ ಜನರು ಸುಲಭವಾಗಿ ಹಣ ಪಡೆಯಬಹುದು. ಆದ್ರೆ ಇದೀಗ ರಾಜ್ಯದಲ್ಲಿ ಮೊದಲ ಬಾರಿಗೆ ಕಲಬುರಗಿಯಲ್ಲಿ ಆರೋಗ್ಯ ಇಲಾಖೆ ಹೆಲ್ತ್ ಎಟಿಎಂ ಆರಂಭಿಸಿದೆ. ಆದ್ರೆ ಹೆಲ್ತ್ ಎಟಿಎಂ ಹಣ ನೀಡೋದಿಲ್ಲಾ. ಬದಲಾಗಿ ಹತ್ತೇ ನಿಮಿಷದಲ್ಲಿ ವ್ಯಕ್ತಿಯ ಆರೋಗ್ಯದ ರಿಪೋರ್ಟ್ ರಿಪೋರ್ಟ್ ನೀಡುತ್ತದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿನೂತನ ತಂತ್ರಜ್ಞಾನದ ಹೆಲ್ತ್ ಎಟಿಎಂಗಳನ್ನು ಕಲಬುರಗಿಯಲ್ಲಿ ಆರಂಭಿಸಲಾಗಿದೆ.
ಡೈಗ್ನೋಸ್ಟಿಕ್ ಕೇಂದ್ರಗಳಿಗೆ ಹೋಗಿ, ಅಲ್ಲಿ ದಿನಗಟ್ಟಲೆ ಕಾಯಬೇಕಾದ ಸ್ಥಿತಿಗೆ ಮುಕ್ತಿ ಹಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಸೆಪ್ಟಂಬರ್ 17 ರಂದು ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದ ದಿನ, ಸಿಎಂ ಸಿದ್ದರಾಮಯ್ಯನವರು ಹೆಲ್ತ್ ಎಟಿಎಂಗೆ ಚಾಲನೆ ನೀಡಿದ್ದರು. ಇದೀಗ ಅವುಗಳು ಕಾರ್ಯಾರಂಭ ಆರಂಭಿಸಿದ್ದು, ಕಲಬುರಗಿ ಜಿಲ್ಲೆಯಲ್ಲಿ ಇಪ್ಪತ್ತೈದು ಸ್ಥಳದಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಹತ್ತೇ ನಿಮಿಷದಲ್ಲಿ ಐವತ್ತಕ್ಕೂ ಹೆಚ್ಚು ವೈದ್ಯಕೀಯ ಪರೀಕ್ಷೆಗಳು ವ್ಯಕ್ತಿಯೋರ್ವನ ಬಿಪಿ, ಶುಗರ್, ಹಿಮೋಗ್ಲೋಬಿನ್, ಮಲೇರಿಯಾ, ಡೆಂಗ್ಯೂ, ಚಿಕನಗುನ್ಯ ಜ್ವರದ ರಿಪೋರ್ಟ್, ಹೈಟ್ -ವೇಯ್ಟ್, ಆಕ್ಸಿಜನ್ ಪ್ರಮಾಣ, ಸೇರಿದಂತೆ ಐವತ್ತಕ್ಕೂ ಹೆಚ್ಚು ಪರೀಕ್ಷೆಗಳ ರಿಪೋರ್ಟ್ ನ್ನು ಕೇವಲ ಹತ್ತೇ ನಿಮಿಷದಲ್ಲಿ ನಿಮ್ಮ ಕಣ್ಣೆದುರಿಗೆ ಪರೀಕ್ಷಿಸಿ ನಿಮಗೆ ನೀಡುತ್ತದೆ ಈ ಹೆಲ್ತ್ ಎಟಿಎಂ. ಮಷಿನ್ ನಲ್ಲಿ ಇಸಿಜಿ ಸೌಲಭ್ಯ ಕೂಡಾ ಇದೆ.
ಇನ್ನೂ ಖಾಸಗಿ ಕಂಪನಿಯೊಂದು, ತನ್ನ ಸಿ ಎಸ್ ಆರ್ ಅನುಧಾನದಲ್ಲಿ, ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಇಪ್ಪತ್ತೈದು ಹೆಲ್ತ್ ಎಟಿಎಂ ಗಳನ್ನು ಖರೀದಿಸಿ, ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದೆ. ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆ, ಈ ಮಷಿನ್ ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಜನಸಂದಣಿ ಇರೋ ಪ್ರದೇಶದಲ್ಲಿ ಅಳವಡಿಸುತ್ತಿದೆ. ಮಷಿನ್ಗಳ ನಿಯಂತ್ರಣಕ್ಕಾಗಿ ಲ್ಯಾಬ್ ಟೆಕ್ನಿಷಿಯನ್ಗಳನ್ನು ಕೂಡಾ ನೇಮಿಸಿದೆ. ಇನ್ನು ಹೆಲ್ತ್ ಎಟಿಎಂ ಸೇವೆ ಉಚಿತವಾಗಿ ಇರಲಿದ್ದು, ಯಾರು ಬೇಕಾದ್ರು ಕೂಡಾ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಹೆಲ್ತ್ ಎಟಿಎಂ ಗಳ ಎಲ್ಲಾ ಪರೀಕ್ಷೆಗಳನ್ನು ನಾವೇ ಮಾಡಿಕೊಳ್ಳಲು ಬರೋದಿಲ್ಲಾ. ಶುಗರ್ ಟೆಸ್ಟ್ ಗೆ ರಕ್ತ ಸಂಗ್ರಹ, ಬಿಪಿ ತಪಾಸಣೆಯನ್ನು ಲ್ಯಾಬ್ ಟೆಕ್ನಿಷಿಯನ್ ಮಾಡ್ತಾರೆ. ಉಳಿದಂತೆ ಆಕ್ಸಿಜನ್ ಲೆವೆಲ್, ಹೈಟ್, ವೇಟ್ ಸೇರಿದಂತೆ ಕೆಲ ಪರೀಕ್ಷೆಗಳನ್ನು ಸ್ವಯಂ ನಾವೇ ಮಾಡಿಕೊಳ್ಳಬಹುದಾಗಿದೆ. ಇನ್ನೂ ಎಲ್ಲಾ ಟೆಸ್ಟ್ಗಳನ್ನ ಮಾಡಿಸಿಕೊಂಡ ನಂತರ ರಿಪೋರ್ಟ್ ವ್ಯಕ್ತಿಯ ವಾಟ್ಸಪ್ಗೆ ರವಾನೆ ಆಗುತ್ತದೆ... ಇದು ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗ್ತಿದೆ ಅಂತಾರೆ ಸಾರ್ವಜನಿಕರು.