ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ, ಕೆಕೆಆರ್ಟಿಸಿ ಸಾರಿಗೆಯ ನೂತನ ಬಸ್ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ
1061 views
kalaburagi ವಿಡಿಯೋಗಳಿಗೆ ಚಂದಾದಾರರಾಗಿಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮಕ್ಕೂ ಮುನ್ನ ಹೈದರಾಬಾದ್ ಕರ್ನಾಟಕ ವಿಮೋಚನೆಯ ರೂವಾರಿಯಾಗಿರುವ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ವಿಮೋಚನೆಯ ಅಮೃತ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ವಿಧಿ ಜಾರಿಯ ದಶಮಾನೋತ್ಸವದ ಹಿನ್ನಲೆ, ಪೋಲಿಸ್ ಪರೇಡ್ ಮೈದಾನಕ್ಕೆ ತೆರಳಿ ಧ್ವಜಾರೋಹಣ ನೆರವೆರಿಸಿ ವಿವಿಧ ತುಕ್ಕಡಿಗಳಿಂದ ಗೌರವ ವಂದನೆಯನ್ನು ಸ್ವೀಕರಿಸಿದರು.
ಇದೆ ವೇಳೆ ಮಾತನಾಡಿದ ಅವರು, ನಮ್ಮ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ವಿಶೇಷ ಯೋಜನೆಗಳನ್ನ ಹಮ್ಮಿಕೊಂಡಿದೆ. ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ, ಬೌದ್ಧ ಧರ್ಮದ ನೆಲೆಯಾಗಿರೋ ಸನ್ನತ್ತಿಯ ಪ್ರದೇಶ ಅಭಿವೃದ್ಧಿಗೆ ಸರ್ಕಾರ ಕ್ರಮ. ಬೀದರ್ನಲ್ಲಿ ಕೃಷ್ಣಮೃಗ ಸಂರಕ್ಷಣೆಗೆ 2 ಕೋಟಿ ರೂ ಹಣ ಮೀಸಲಿಡಲಾಗಿದೆ. ಕೊಪ್ಪಳದಲ್ಲಿ 3.50 ಕೋಟಿ ರೂ ವೆಚ್ಚದಲ್ಲಿ ಜಾನಪದ ಲೋಕ ಈ ವರ್ಷವೇ ಆರಂಭ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಸಂಬಂಧಿಸಿದಂತೆ ಕೇಂದ್ರದ ಜೊತೆ ನಿರಂತರ ಚರ್ಚೆ ನಡೆಸಲಾಗ್ತಿದೆ ಎಂದರು.
ಇದೆ ಸಂಧರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರು ಪ್ರಯಾಣಿಕರ ಅನುಕೂಲಕ್ಕಾಗಿ ಕೆಕೆಆರ್ಟಿಸಿ ಸಾರಿಗೆಯ ನೂತನ ಐಷಾರಾಮಿ ಸಾರಿಗೆ ಬಸ್ ಗಳಿಗೆ ಕಲಬುರಗಿ ಡಿಎಆರ್ ಮೈದಾನದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಎಸಿ ಹೈಟೆಕ್ ಸ್ಲೀಪರ್, ನಾನ್ ಎಸಿ ಸ್ಲೀಪರ್ ಬಸ್, ಎಕ್ಸ್ ಪ್ರೇಸ್ ಬಸ್ ಸೇರಿ ಒಟ್ಟು 658 ನೂತನ ಬಸ್ ಗಳಿಗೆ ಚಾಲನೆ ನೀಡಲಾಯಿತು. ಸಾಂಕೇತಿಕವಾಗಿ ಸಿಎಂ ಏಳು ಬಸ್ಗಳಿಗೆ ಚಾಲನೆ ಕೊಟ್ಟರು.