ಕುಮಾರಸ್ವಾಮಿ ಅಸ್ತಿತ್ವ ಉಳಿಸಿಕೊಳ್ಳಲು ದೆಹಲಿಗೆ ಹೋಗಿ ಕಾಲು ಬಿದ್ದು ಬಂದಿದ್ದಾರೆ ; ಪ್ರಿಯಾಂಕ್ ಖರ್ಗೆ
1118 views
kalaburagi ವಿಡಿಯೋಗಳಿಗೆ ಚಂದಾದಾರರಾಗಿಕಲಬುರಗಿ:ಕಾವೇರಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಸಚಿವ ಪ್ರೀಯಾಂಕ್ ಖರ್ಗೆ ಹೇಳಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಮಾತನಾಡಿದ ಅವರು, ನಾವು ಈ ನೆಲದ ಕಾನೂನು ಪಾಲನೆ ಮಾಡಬೇಕಲ್ವಾ?, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ನೀರು ಬಿಟ್ಟಿರಲಿಲ್ವಾ?, ಅನ್ಯಾಯವಾಗ್ತಿದೆ ಅಂತಲೇ ನಾವು ಮೇಕೆದಾಟು ಯೋಜನೆ ಮಾಡ್ತಿರೋದು ಎಂದು ಹೇಳಿದರು.
ಮೇಕೆದಾಟು ಯೋಜನೆಗೆ ಬಿಜೆಪಿಯವರು ವಿರುದ್ಧ ಇದ್ದರು, ಸರ್ಕಾರದ ಜವಾಬ್ದಾರಿ ನಾವು ಮಾಡ್ತಿದ್ದೇವೆ, ಬಂದ್ ನಿಂದ ಆರ್ಥಿಕ ಹೊರೆ ಬೀಳುತ್ತದೆ ಅಂತ ಹೇಳಿದ್ದೇವೆ ಎಂದು ಹೇಳಿದರು. ಮುಖ್ಯಮಂತ್ರಿ , ಡಿಸಿಎಂ ಅವರು ಸಾರ್ವಜನಿಕರಿಗೆ, ರೈತ ಸಂಘಗಳಿಗೆ ಜೊತೆಗೆ ಇರೋಣ ಅಂತಾ ಮನವಿ ಮಾಡಿದ್ದಾರೆ, ಪ್ರತಿಭಟನೆ ಮಾಡೋದು ಅವರ ಹಕ್ಕಿದೆ , ನಾವು ಮಾಡಬೇಡಿ ಅಂತಾ ಹೇಳೋದಕ್ಕೆ ಆಗಲ್ಲ, ಸರ್ಕಾರ ಕಾನೂನಾತ್ಮಕವಾಗಿ ಹೋರಾಟ ಮಾಡ್ತಿದೆ, ಕೇಂದ್ರ ಸರ್ಕಾರಕ್ಕೂ ಹೋಗಿ ಭೇಟಿ ಮಾಡಿ ಬಂದಿದೆ, ಇಷ್ಟಾದ ಮೇಲೂ ಪ್ರತಿಭಟನೆ ಮಾಡೋದು ಸರಿಯಲ್ಲ, ನಾವು ರೈತರ ಜೊತೆಗೆ ಇದ್ದೇವೆ ಹಾಗಾಗಿ ರೈತರು ಪ್ರತಿಭಟನೆ ಮಾಡೋದು ಬೇಡ ಎಂದು ಮನವಿ ಮಾಡಿದರು.
ಕುಮಾರಸ್ವಾಮಿ ಅಸ್ತಿತ್ವ ಉಳಸಿಕೊಳ್ಳಲು ದೆಹಲಿಗೆ ಹೋಗಿ ಕಾಲು ಬಿದ್ದು ಬಂದಿದ್ದಾರೆ, ಪ್ರಧಾನಿ ಬಳಿ ಹೋಗಿ ಅವರ ಅಸ್ತಿತ್ವ ಉಳಸಿಕೊಳ್ಳಲು ಹೋಗಿದ್ದರಾ?, ಅಥವಾ ಅವರು ಕಾವೇರಿ ವಿಚಾರ ಚರ್ಚೆ ಮಾಡಿದ್ರಾ ?, ದಯವಿಟ್ಟು ಯಾರು ಇದರಲ್ಲಿ ರಾಜಕೀಯ ಮಾಡೋದಕ್ಕೆ ಹೋಗಬೇಡಿ, ನ್ಯಾಯ ಆಗ್ತಿದೆ ಅಂತಾ ಮೇಕೆದಾಟು ಯೋಜನೆ ಮಾಡ್ತಿದ್ದೇವೆ, ರೈತರಿಗಾಗಿಯೇ ಪಾದಯಾತ್ರೆ ಮಾಡಿರೋದು, ನಮ್ಮ ಸಲುವಾಗಿ ಅಲ್ಲ ಎಂದು ಹೇಳಿದರು.