ರಾಜ್ಯದಲ್ಲಿ ಬರ ಆವರಿಸಿದೆ, ಸರ್ಕಾರಕ್ಕೆ ರೈತರು ಶಾಪ ಹಾಕುತ್ತಿದ್ದಾರೆ ; ರವಿಕುಮಾರ್
ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಅನ್ನುವುದು ಸಂಪೂರ್ಣವಾಗಿ ಸ್ಥಗಿತವಾಗಿದೆ. ರಾಜ್ಯದಲ್ಲಿ ಎಲ್ಲಿಯು ಸಹ ಒಂದು ಕಿಲೋ ಮೀಟರ್ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಎಂಎಲ್ ಸಿ ರವಿ ಕುಮಾರ್ ವಾಗ್ದಾಳಿ ನಡೆಸಿದರು.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ರು. ಕಾವೇರಿ ನೀರಿನ ವಿಚಾರದಲ್ಲಿ ರೈತರನ್ನು ಬಲಿ ಕೊಟ್ಟು ತಮಿಳುನಾಡಿಗೆ ನೀರನ್ನು ಹರಿಸಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಅಭಾವ ಇದ್ರು ಸಹ ನೀರನ್ನು ಹರಿಸಲಾಗುತ್ತಿದೆ. ರಾಜ್ಯಾದ್ಯಂತ ಬರ ಆವರಿಸಿದ್ದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಪಂಪ್ ಸೆಟ್ ಗಳಿಗೆ ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಪ್ರವಾಸವನ್ನು ಮಾಡಲಿದ್ದೇವೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು, ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗಲಿದ್ದಾರೆ. ರಾಜ್ಯ ಸರ್ಕಾರ ಸಮಸ್ಯೆಗಳ ವಿರುದ್ಧ ದೊಡ್ಡ ಹೋರಾಟವನ್ನು ಮಾಡುತ್ತೇವೆ. ಕುರುಡುಮಲೆ ಗಣಪತಿಗೆ ಪೂಜೆ ಬಳಿಕ ಶ್ರೀನಿವಾಸಪುರದಲ್ಲಿ ರೈತರನ್ನು ಭೇಟಿ ಮಾಡುತ್ತೇವೆ. ಗಣೇಶ ಹಬ್ಬ ಮುಗಿದ ಬಳಿಕ ರಾಜ್ಯಾದ್ಯಂತ ಪ್ರವಾಸ ಆರಂಭವಾಗುತ್ತದೆ. ಕಾವೇರಿ ವಿಚಾರವಾಗಿ ಮೊದಲು ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಗೆ ಭೇಟಿಯನ್ನು ನೀಡಲಿದ್ದೇವೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಯ ಮಾತುಕತೆ ನಡೆಯುತ್ತಿದೆ. ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರು ಸ್ಪಷ್ಟನೆಯನ್ನು ನೀಡಲಿದ್ದಾರೆ. ಹಾಲಿ ಸಂಸದರು ಇರುವ ಕಡೆ ಬಿಜೆಪಿ ಕ್ಷೇತ್ರಗಳನ್ನು ಬಿಜೆಪಿಗೇ ಬಿಟ್ಟುಕೊಡಬೇಕು ಅಂತ ಒತ್ತಾಸೆ ಇದೆ. ರಾಷ್ಟ್ರೀಯ ನಾಯಕರು ಏನು ನಿರ್ಣಯ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಸಚಿವ ರಾಜಣ್ಣ ಹೇಳಿರೋದು ಮೂರು ಡಿಸಿಎಂ ಹುದ್ದೆಗಳು, ಇನ್ಯಾರ್ಯಾರ ಮನಸ್ಸಿನಲ್ಲಿ ಎಷ್ಟು ಹುದ್ದೆಗಳಿವೆಯೋ ಗೊತ್ತಿಲ್ಲ. ಸಿಎಂ ಸ್ಥಾನ ಬೇಕು ಅಂತ ಪರಮೇಶ್ವರ್ ಕೇಳ್ತಿದ್ದಾರೆ. ಎರಡೂವರೆ ವರ್ಷ ಯಾವಾಗ ಆಗುತ್ತೊ ಅಂತ ಡಿಕೆ ಶಿವಕುಮಾರ್ ಕಾಯುತ್ತಿದ್ದಾರೆ. ಆದ್ರೆ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಸರ್ಕಾರಕ್ಕೆ ರೈತರು ಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಬರ ಆವರಿಸಿದೆ. ಕಾಂಗ್ರೆಸ್ ನ ಶಾಸಕರೆ ಅಭಿವೃದ್ಧಿ ಬಗ್ಗೆ ಪತ್ರ ಬರೆದಿದ್ದಾರೆ. ಐದು ಗ್ಯಾರಂಟಿಗಳು ಬಿಟ್ಟು ಬೇರೆ ಸ್ಕೀಮ್ ಗಳೇ ಇಲ್ಲವಾ ಎಂದು ಪ್ರಶ್ನಿಸಿದ್ರು.

Curated by Shivamoorthi M|TimesXP Kannada|18 Sept 2023