ಚೈತ್ರಾ ಕುಂದಾಪುರ, ಚಕ್ರವರ್ತಿ ಸೂಲಿಬೆಲಿ ಅಣ್ಣ ತಂಗಿ ; ಸಚಿವ ಶಿವರಾಜ ತಂಗಡಗಿ
ಕೊಪ್ಪಳ: ಬಿಜೆಪಿಯೊಳಗೆ ಸಿಎಂ ಸೇರಿ ಎಲ್ಲಾ ಸ್ಥಾನಗಳು ಸೇಲ್ ಆಗಿವೆ. ಇದೇ ವೇಳೆವಿರೋಧ ಪಕ್ಷಕ್ಕೆ ಇನ್ನೂ ಟೆಂಡರ್ ಆಗಿಲ್ಲ, ಈಗ ಟೆಂಡರ್ ಕರೆದಿದ್ದಾರೆ, ಟೆಂಡರ್ ಜೆಡಿಎಸ್ನವರು ಬಂದು ಕೂಗಬಹುದು ಎಂದು ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದರು.
ಕೊಪ್ಪಳದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಎಲ್ಲಾ ಸೀಟುಗಳು ಮಾರಟವಾಗಿವೆ. ಕನಕಗಿರಿಯಲ್ಲಿಯೂ ಹಣ ನೀಡಿದ್ದರೆ ಸಿಸಿಬಿ ಪೊಲೀಸರು ತನಿಖೆಯಾಗಲಿ. ಬಿಜೆಪಿಯಲ್ಲಿ ಎಂಪಿ ಟಿಕೆಟ್ ಇದೇ ರೀತಿ ಸೇಲ್ ಆಗಬಹುದು. 5 ಕೋಟಿ ಎಂಎಲ್ಎ, 10 ಕೋಟಿ ಲೋಕಸಭಾ ಕ್ಷೇತ್ರಕ್ಕೆ 80 ಕೋಟಿ ಸಚಿವರಿಗೆ, 2500 ಕೋಟಿ ಮುಖ್ಯಮಂತ್ರಿ ಸೇಲ್ ಆಗಬಹುದು ಎಂದರು.
ಚೈತ್ರಾ ಕುಂದಾಪುರ ಹಾಗೂ ಚಕ್ರವರ್ತಿ ಸೂಲಿಬೇಲಿ ಅಣ್ಣ ತಂಗಿ ಎಂದು ಟೀಕಿಸಿದರು. ಡಿಸಿಎಂ ಹುದ್ದೆಯ ಬಗ್ಗೆ ಕೆಎನ್ ರಾಜಣ್ಣ ಹೇಳಿದ್ದರ ಬಗ್ಗೆ ನೋ ಕಾಮೆಂಟ್ ಎಂದರು. ರಾಜಣ್ಣ ಡಿಸಿಎಂ ಬಗ್ಗೆ ಹೇಳಿದ್ದಾರೆ, ಅದನ್ನ ಹೈಕಮಾಂಡ್ ನೋಡಿಕೊಳ್ಳುತ್ತೆ ಎಂದು ಹೇಳಿದರು. ಜೆಡಿಎಸ್ನೊಂದಿಗೆ ಬಿಜೆಪಿ ಹೊಂದಾಣಿಕೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಲಾಭವಾಗುತ್ತದೆ. ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆಯಿಂದ ನಮಗೆ ಲಾಭವಿಲ್ಲ. ನಷ್ಟವಿಲ್ಲ ಎಂದರು.

Curated by Shivamoorthi M|TimesXP Kannada|18 Sept 2023