ಕಾವೇರಿ ಕಿಚ್ಚು ; ಶಾಸಕರೆಲ್ಲ ರಾಜೀನಾಮೆ ಕೊಟ್ಟು ಹೋರಾಟಕ್ಕೆ ಬನ್ನಿ; ಸುರೇಶ್ ಗೌಡ
3273 views
mandya ವಿಡಿಯೋಗಳಿಗೆ ಚಂದಾದಾರರಾಗಿಮಂಡ್ಯ:ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರಕ್ಕೆ ಜೆಡಿಎಸ್ನ ಮಾಜಿ ಶಾಸಕ ಸುರೇಶ್ಗೌಡ ಕಿಡಿಕಾರಿದ್ದಾರೆ. ಅಧಿಕಾರಿಗಳು ಕೊಟ್ಟ ಮಾಹಿತಿ ನಾನು ಹೇಳ್ತಿದ್ದೀನಿ. ಕೋರ್ಟ್, ಪ್ರಾಧಿಕಾರ ಹೇಳುವ ಮುನ್ನವೇ ನೀರು ಬಿಡ್ತಿದ್ದಾರೆ. ಈಗ ನಿತ್ಯ 5 ಸಾವಿರ ಕ್ಯೂಸೆಕ್ ಬಿಡುಗಡೆ ಅಂತಾ ಹೇಳ್ತಿದ್ದಾರೆ. ಆದ್ರೆ, ಅನಧಿಕೃತವಾಗಿ 5 ಸಾವಿರ ಕ್ಯೂಸೆಕ್ ಗೂ ಹೆಚ್ಚಿನ ಪ್ರಮಾಣದ ನೀರು ಬಿಡಲಾಗ್ತಿದೆ ಎಂದು ಆರೋಪ ಮಾಡಿದ್ರು.
ರಾತ್ರಿ 5 ಸಾವಿರ ಬೆಳಿಗ್ಗೆ 10 ಸಾವಿರ ಕ್ಯೂಸೆಕ್ ಬಿಡ್ತಿದ್ದಾರೆ. ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ.
ಕಾವೇರಿ ಹೆಸರು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ ಜವಾಬ್ದಾರಿ ಮರೆತಿದೆ. ಈ ಸರ್ಕಾರಕ್ಕೆ ತಮಿಳುನಾಡಿಗೆ ನೀರು ಕೊಡುವುದಷ್ಟೇ ಉದ್ದೇಶ. ಮಳೆ ಕಡಿಮೆಯಾಗುವ ಬಗ್ಗೆ ಮಾಹಿತಿ ಇದ್ದರು ಕೆರೆ, ಕಟ್ಟೆ ತುಂಬಿಸುವ ಕೆಲಸ ಮಾಡಲಿಲ್ಲ. ಪ್ರಾಧಿಕಾರಕ್ಕೆ ಮನವರಿಕೆ ಮಾಡುವಲ್ಲಿಯೂ ವಿಫಲವಾಗಿದೆ. ಕಾಟಾಚಾರಕ್ಕೆ ಸರ್ವಪಕ್ಷ ಸಭೆ ಕರೆದರೂ. ಪ್ರಚಾರ ಕಾರ್ಯದಲ್ಲಷ್ಟೇ ಸರ್ಕಾರ ಮುಳುಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಡಿಸೆಂಬರ್ ಬಳಿಕ ಕುಡಿಯಲು ನೀರು ಸಿಗುವುದಿಲ್ಲ. ತಮಿಳುನಾಡಿಗೆ ಉತ್ತಮ ಮಳೆಯಾಗವ ಅವಕಾಶ ಇದೆ. ಕರ್ನಾಟಕಕ್ಕೆ ಮಳೆ ಸಾಧ್ಯತೆ ಕಡಿಮೆ. ಸರ್ಕಾರದ ಮಂತ್ರಿ ಹುರುಳಿ ಬೆಳೆಯಿರಿ ಎಂದು ಬೇಜವಾಬ್ದಾರಿ ಹೇಳಿಕೆ ಕೊಡ್ತಾರೆ. ಈ ಸರ್ಕಾರವೇ ಮೇಲೆ ಬಿದ್ದು ನೀರು ಬಿಡುವುದಾಗಿ ಹೇಳ್ತಿದೆ. 5 ಸಾವಿರಕ್ಕೂ ಹೆಚ್ಚು ನೀರು ಬಿಡ್ತಿದ್ದಾರೆ. ರಾತ್ರಿ 5 ಸಾವಿರ ಬೆಳಿಗ್ಗೆ 10 ಸಾವಿರ ಕ್ಯೂಸೆಕ್ ಬಿಡ್ತಿದ್ದಾರೆ. ತಮಿಳುನಾಡು ಓಲೈಸಿಕೊಳ್ಳುವ ಕೆಲಸ ಸರ್ಕಾರ ಮಾಡ್ತಿದೆ. ತಮಿಳುನಾಡು ವಿಸ್ತೀರ್ಣ ಹೆಚ್ಚಿಗೆ ಮಾಡಿರುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ಭಾಗದ ಶಾಸಕರು ರಾಜೀನಾಮೆ ಕೊಟ್ಟು ಹೋರಾಟ ಮಾಡಿ ಎಂದು ಹೇಳಿದರು.