ಮೂವರು ಡಿಸಿಎಂ ಬೇಡಿಕೆ ತಪ್ಪಲ್ಲ ; ಕೆಎನ್ ರಾಜಣ್ಣ ಪರ ಪರಮೇಶ್ವರ್ ಬ್ಯಾಟಿಂಗ್
1054 views
mandya ವಿಡಿಯೋಗಳಿಗೆ ಚಂದಾದಾರರಾಗಿಮಂಡ್ಯ:ಮೂವರು ಡಿಸಿಎಂ ಬೇಡಿಕೆ ತಪ್ಪಲ್ಲ ಎಂದು ಕೆಎನ್ ರಾಜಣ್ಣ ಪರ ಗೃಹ ಸಚಿವ ಜಿ ಪರಮೇಶ್ವರ್ ಬ್ಯಾಟಿಂಗ್ ಮಾಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಮೂವರು ಡಿಸಿಎಂ ಬೇಡಿಕೆ ತಪ್ಪಲ್ಲ, ಇದೆಲ್ಲ ನಮ್ಮ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ನಮ್ಮ ಶಾಸಕರು, ಸಚಿವರು ಅವರ ವೈಯಕ್ತಿಕ ಅಭಿಪ್ರಾಯಗಳನ್ನ ಆಗಾಗ ಹೇಳ್ತಿರುತ್ತಾರೆ. ಆದ್ರೆ, ಇದರ ಅಂತಿಮ ತೀರ್ಮಾನ ಮಾಡೋದು ಹೈಕಮಾಂಡ್, ಈ ವಿಚಾರವನ್ನ ಹೈಕಮಾಂಡ್ ಗೆ ಬಿಟ್ಟು ಬಿಡೋಣ. ಕೆಎನ್ ರಾಜಣ್ಣ ಹೇಳಿಕೆ ಕೂಡ ತಪ್ಪಲ್ಲ, ಅವರ ಅಭಿಪ್ರಾಯ ಹೇಳಿದ್ದಾರೆ ಎಂದು ಹೇಳಿದರು.
ಇಂದು ಕಾವೇರಿ ನಿರ್ವಾಹಣಾ ಪ್ರಾಧಿಕಾರದ ಸಭೆ ಇದೆ, ಏನು ತೀರ್ಪು ಬರುತ್ತೆ ಕಾದು ನೋಡೋಣ, ನಮ್ಮ ಪರವಾಗಿ ಬರಬೇಕು ಅಂತ ನಾವೆಲ್ಲ ಆಸೆ ಇಟ್ಟಿದ್ದೇವೆ. ಅದಕ್ಕೆ ತಕ್ಕಂತೆ ಎಲ್ಲಾ ವಿಷಯಗಳನ್ನ ತಿಳಿಸಿದ್ದೇವೆ. ಕಾದು ನೋಡೋಣ ಎಂದು ಹೇಳಿದರು,
ವಿಶೇಷ ಅಧಿವೇಶನದಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಮಸೂದೆ ಮಂಡನೆ ವಿಚಾರಕ್ಕೆ ಮಾತನಾಡಿದ ಅವರು, ನೊಡೋಣ ಏನು ಅಜೆಂಡಾ ತರ್ತಾರೆ ಅಂತ. ಬಂದ ನಂತರ ನಮ್ಮ ಪಕ್ಷ ನಿಲುವನ್ನ ವರಿಷ್ಠರು, ಲೋಕಸಭಾ ಸದಸ್ಯರು ತಿಳಿಸುತ್ತಾರೆ. ಕಾವೇರಿ ವಿಚಾರವಾಗಿ ಸರ್ವ ಪಕ್ಷ ಸಭೆಯಲ್ಲಿ ಚರ್ಚೆ ಮಾಡಲಾಗುತ್ತೆ, ಸರ್ವ ಪಕ್ಷದ ಸಭೆಯನ್ನ ಮುಖ್ಯಮಂತ್ರಿಗಳು ಕರೆದು ಎಲ್ಲ ಮಾಹಿತಿಯನ್ನು ಅವರಿಗೆ ಒದಗಿಸಿದ್ದಾರೆ. ನಿಮಗೆ ಸಹಕಾರ ಕೊಡ್ತೇವೆ ಅಂತ ಬಿಜೆಪಿ, ಜೆಡಿಎಸ್ ನವರು ತಿಳಿಸಿದ್ದಾರೆ. ಒಳಗಡೆ ಸಂಪೂರ್ಣ ಸಹಕಾರ ಕೊಡ್ತೇವೆ ಅಂತ ಹೇಳಿ ಈಗ ಹೋರಾಟ ಮಾಡ್ತೀವಿ ಅಂದ್ರೆ ಅದಕ್ಕೆ ಅರ್ಥ ಇದ್ಯಾ?, ವಿರೋಧ ಪಕ್ಷದವರು ಸಂಪೂರ್ಣ ಸಹಕಾರ ಕೊಡಬೇಕು ಎಂದು ಹೇಳಿದರು.