ತಮಿಳುನಾಡಿಗೆ ನೀರು ಬಿಡುವುದು ನಿಲ್ಲಿಸಿ, ಇಲ್ಲವೇ ನಮಗೆ ದಯಾಮರಣ ಕೊಡಿಸಿ: ಮಂಡ್ಯದಲ್ಲಿ ಪ್ರತಿಭಟನಾಕಾರರ ಆಕ್ರೋಶ
1121 views
mandya ವಿಡಿಯೋಗಳಿಗೆ ಚಂದಾದಾರರಾಗಿಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿಯ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಎಂಬುವವರು ಕಾವೇರಿ ಹೋರಾಟದ ಭಾಗವಾಗಿ ಮೈಮೇಲೆ ಗಂಜಲ, ಸಗಣಿ ನೀರು ಸುರಿದುಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಮಂಡ್ಯದಲ್ಲಿ ಕಾವೇರಿ ಹೋರಾಟವು ತಾರಕಕ್ಕೇರುತ್ತಿದೆ. ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ಆಕ್ರೋಶ ಹೆಚ್ಚಾಗಿದೆ. ಮಂಡ್ಯ ಡಿಸಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದಯಾಮರಣಕ್ಕೆ ಅನುಮತಿ ಕೊಡಿಸುವಂತೆ ಕೋರಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
''ತಮಿಳುನಾಡಿಗೆ ನೀರು ಬಿಡುತ್ತಿರುವುದರಿಂದ ನಾವು ಬೆಳೆ ಬೆಳೆಯುವುದಕ್ಕೆ ಆಗುವುದಿಲ್ಲ. ಬೆಳೆ ಬೆಳೆಯದೆ ಜೀವನ ನಡೆಸುವುದು ಹೇಗೆ? ಜೀವನ ಸಾಗಿಸಲು ಪಾಟ್ ಅಥವಾ ಚಿಕ್ಕ ಜಾಗದಲ್ಲಿ ಗಾಂಜಾ ಬೆಳೆಯೋದಕ್ಕೆ ಅವಕಾಶ ನೀಡಿ. ಮನೆ ಬಳಿಕೆಯ ನೀರಿನಲ್ಲೇ ಗಾಂಜಾ ಬೆಳೆದು ಬದುಕು ನಡೆಸುತ್ತೇವೆ. ಗಾಂಜಾ ಬೆಳೆಯಲು ಅವಕಾಶ ನೀಡದಿದ್ದರೆ, ರಾಷ್ಟ್ರಪತಿಗಳಿಂದ ದಯಾಮರಣಕ್ಕೆ ಅನುಮತಿ ಕೊಡಿಸಿ'' ಎಂದು ಆಗ್ರಹಿಸಿದರು.
ಮನವಿ ಸಲ್ಲಿಕೆ ಬಳಿಕ ಮೈಮೇಲೆ ಸಗಣಿ, ಗಂಜಲ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಾ ನೀರು ತಮಿಳುನಾಡಿಗೆ ಹೋದಮೇಲೆ ನಾವು ಸಗಣಿ ನೀರಿನಲ್ಲೇ ಸ್ನಾನ ಮಾಡಬೇಕಾಗುತ್ತದೆ ಎಂದು ಕಿಡಿಕಾರಿದರು.