ಕಾವೇರಿಗಾಗಿ ಮಳವಳ್ಳಿ ಬಂದ್, ತೆರೆಯದ ಅಂಗಡಿಗಳು
1102 views
mandya ವಿಡಿಯೋಗಳಿಗೆ ಚಂದಾದಾರರಾಗಿಕಾವೇರಿ ನದಿ ನೀರನ್ನು ನಾಡಿನ ರೈತರಿಗೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಕಡೆ ಪ್ರತಿಭಟನೆಗಳು ಹಾಗೂ ಬಂದ್ ನಡೆಸಲಾಗುತ್ತಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣವನ್ನು ಮಂಗಳವಾರ ಬಂದ್ ಮಾಡಲಾಗಿದೆ.
ಮಳವಳ್ಳಿ ಬಂದ್ಗೆ ರೈತ, ಕನ್ನಡ ಹಾಗೂ ಪ್ರಗತಿಪರ ಸಂಘನೆಗಳು ಕರೆ ನೀಡಿದ್ದವು. ಬಂದ್ಗೆ ಉತ್ತಮ ಸ್ಪಂದನೆ ದೊರೆತಿದ್ದು, ಮಳವಳ್ಳಿ ಪಟ್ಟಣ ಸ್ತಬ್ದವಾಗಿದೆ. ಮಳವಳ್ಳಿಯಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲಿನ ಬೂತ್ ಕಾರ್ಯಾಚರಿಸುತ್ತಿವೆ.
ಪಟ್ಟಣಾದ್ಯಂತ ಬೃಹತ್ ಪ್ರತಿಭಟನೆ ಮತ್ತು ಬೈಕ್ ರ್ಯಾಲಿಗಳನ್ನು ನಡೆಸಲಾಗುತ್ತಿದೆ. ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಬೆಳ್ಳಂಬೆಳ್ಳಿಗೆ ಬೈಕ್ ರ್ಯಾಲಿ ನಡೆಯಿತು. ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲು ಮನವಿ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ.