ಕಲಬುರಗಿ: ಆರ್ಡಿ ಪಾಟೀಲ್ಗೆ ಶಾಸಕರು, ಸರಕಾರದ ಬೆಂಬಲ- ಬಿವೈ ವಿಜಯೇಂದ್ರ
1039 views
ಮಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಇತ್ತೀಚೆಗೆ ಕಲಬುರಗಿ ಜಿಲ್ಲೆಯಲ್ಲಿ ಕೆಇಎ ವತಿಯಿಂದ ನಡೆದ ನಾನಾ ನಿಗಮಗಳ ಖಾಲಿ ಹುದ್ದೆಗಳಿಗಾಗಿ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣದ ಕಿಂಗ್ಪಿನ್ ಆರ್ಡಿ ಪಾಟೀಲ್ ಓಡಿಹೋಗುತ್ತಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಆರ್ ಡಿ ಪಾಟೀಲ್ ಗೆ ಕಾಂಗ್ರೇಸ್ ಸರ್ಕಾರದ ಘಟಾನುಘಟಿ ನಾಯಕರ ಸಂಪರ್ಕ ಇದೆ. ಆತ ಸಾಮಾನ್ಯದವನಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ವರ್ಧಾ ಅಪಾರ್ಟ್ಮೆಂಟ್ನಿಂದ ಆರ್ಡಿ ಪಾಟೀಲ್ ಎಸ್ಕೆಪ್ ಆಗಿದ್ದಾನೆ. ಪರೀಕ್ಷಾ ಅಕ್ರಮ ಪ್ರಕರಣ ಹೊರ ಬೀಳುತ್ತಿದ್ದಂತೆಯೇ ತೆಲೆಮರೆಸಿಕೊಂಡಿದ್ದ ಆರ್ಡಿ ಪಾಟೀಲ್, ಕಳೆದ ಭಾನುವಾರ ದಿಂದ ಸೋಮವಾರದ ವರೆಗೆ ಕಲಬುರಗಿಯಲ್ಲೆ ತಂಗಿರುವ ಶಂಕೆ ವ್ಯಕ್ತವಾಗಿದೆ. ಅಪಾರ್ಟ್ಮೆಂಟ್ನಲ್ಲಿ ತಂಗಿದ್ದ ವಿಷಯ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಆರ್ಡಿ ಪಾಟೀಲ್ ಕೌಂಪೌಂಡ್ ಹಾರಿ ಪರಾರಿಯಾಗಿದ್ದಾನೆ. ಅಪಾರ್ಟ್ಮೆಂಟ್ನ ಹಿಂಬದಿ ಕಾಂಪೌಂಡ್ ಹಾರಿ ಪರಾರಿಯಾಗಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾಂಪೌಂಡ್ ಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್ ಕೂಡ ಕೆಳಗೆ ಜಿಗಿದಿದ್ದಾನೆ.
ಕೆಇಎ ಪರೀಕ್ಷೆ ಹಗರಣದ ಮಾಸ್ಟರ್ ಮೈಂಡ್ ಆಗಿರಿವ ಕಿಂಗ್ ಪಿನ್ ಆರ್ ಡಿ ಪಾಟೀಲ್ ನಗರದಲ್ಲೆ ಇದ್ರು ಆತನ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ವಾ ? ಹಾಗೂ ಪೋಲಿಸರು ಬರುವ ಮಾಹಿತಿ ಆರ್ ಡಿ ಪಿಗೆ ತಿಳಿಸಿದ್ದು ಯಾರು ಎಂಬ ಅನುಮಾನದ ದಟ್ಟವಾಗಿದ್ದು ಪೋಲಿಸರ ವೈಫಲ್ಯ ಎದ್ದು ಕಾಣುತ್ತಿದೆ.