ಮಂಗಳೂರು: ಮಾಜಿ ಶಾಸಕರ ಮಶ್ರೂಮ್ ಫ್ಯಾಕ್ಟರಿ ಎತ್ತಂಗಡಿಗಾಗಿ ನಾಗರಿಕರ ಪ್ರತಿಭಟನೆ
1078 views
ಮಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಮಂಗಳೂರು: ಸದಾ ಗಬ್ಬೆದ್ದು ನಾರುವ ಮಶ್ರೂಮ್ ಫ್ಯಾಕ್ಟರಿಯ ದುರ್ನಾತದಿಂದ ನಮಗೆ ಬದುಕಲು ಸಾಧ್ಯವಿಲ್ಲ. ಊಟ ಮಾಡಲಾಗುತ್ತಿಲ್ಲ, ಉಬ್ಬಸ, ದಮ್ಮು ಕೆಮ್ಮು ಚರ್ಮ ವ್ಯಾಧಿಗಳಿಗೆ ತುತ್ತಾಗುತ್ತಿದ್ದೇವೆ. ಈ ಫ್ಯಾಕ್ಟರಿಯನ್ನು ಇಲ್ಲಿಂದ ಎತ್ತಂಗಡಿ ಮಾಡಿಸಿ ಎಂದು ಮಂಗಳೂರಿನ ವಾಮಂಜೂರು - ತಿರುವೈಲ್ ವಾರ್ಡ್ ನಾಗರಿಕರು ವೈಟ್ ಗ್ರೋ ಅಗ್ರಿ ಎಲ್ಎಲ್ಪಿ ಮಶ್ರೂಮ್ ಫ್ಯಾಕ್ಟರಿಯ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದಾರೆ.
ಮಾಜಿ ಶಾಸಕ ಜೆ.ಆರ್.ಲೋಬೊ ಪಾಲುದಾರಿಕೆಯ ಒಡೆತನಕ್ಕೆ ಸೇರಿದ ಫ್ಯಾಕ್ಟರಿ ಇದಾಗಿದೆ. ಕೊರೊನಾ ಸಂದರ್ಭ ಚಾಕಲೇಟ್ ತಯಾರಕ ಸಂಸ್ಥೆ ಎಂದು ಈ ಫ್ಯಾಕ್ಟರಿಯನ್ನು ಸ್ಥಾಪಿಸಲಾಗಿತ್ತು. ಆ ಬಳಿಕ ಇಲ್ಲಿ ಮಶ್ರೂಮ್ ಬೆಳೆಸಲಾಗುತ್ತಿದೆ. ಈ ಫ್ಯಾಕ್ಟರಿಯಿಂದ ನಿತ್ಯವೂ ತಿರುವೈಲು ಸೇರಿದಂತೆ ವಾಮಂಜೂರು ವ್ಯಾಪ್ತಿಯಲ್ಲಿ ಗಬ್ಬು ವಾಸನೆ ಬರುತ್ತಿದೆ. ಜನವಸತಿ ಪ್ರದೇಶದಿಂದ ಈ ಫ್ಯಾಕ್ಟರಿಯನ್ನು ತೆರವು ಮಾಡಿಸಲು ಒಂದು ವರ್ಷದಿಂದ ನಾಗರಿಕರು ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಹೋರಾಟಕ್ಕೆ ಕಿಮ್ಮತ್ತಿನ ಬೆಲೆಯೂ ಸಿಕ್ಕಿಲ್ಲ.