ಮಂತ್ರದೇವತೆಯೆಂದರೆ ಒಂದು ಮಾಯಾಶಕ್ತಿಯಾಗಿದ್ದು, ಇದಕ್ಕೆ ಕೋಲ ನಡೆಯಬೇಕಾದರೆ, ಕಾಯದಲ್ಲಿ ನಲಿಕೆಯವರು ಕೋಲ ಕಟ್ಟಬೇಕು. ಮನೆಯಲ್ಲಿ ಶುಭ ಸಂದರ್ಭಗಳಾದ ಗೃಹ ಪ್ರವೇಶ, ಮದುವೆ ಸಮಾರಂಭ ಅಥವಾ ಹರಕೆ ಹೊತ್ತಂತ ಸಂದರ್ಭದಲ್ಲಿ ಕೋಲ ನಡೆಸುತ್ತಾರೆ. ಮಂತ್ರದೇವತೆ ಶಕ್ತಿಯು ತುಳುನಾಡಿನ ನೂರರಲ್ಲಿ ಹತ್ತು ಮನೆಯವರು, ನಂಬಿಕೊಂಡು ಆರಾಧಿಸುತ್ತಾ ಬರುತ್ತಿದ್ದಾರೆ. ಮಂತ್ರ ಮೂರುತಿ ಎಂದು ಕರೆಸಿಕೊಳ್ಳುವ ಶಕ್ತಿಯನ್ನು ಕೆಲವರು ಬೀರು ಮಲ್ಉಡನ ಒಡ ಹುಟ್ಟಿದ ಸಹೋದರಿ, 'ಸತ್ಯಮ್ಮನ ಇನ್ನೊಂದು ಅವತಾರ ಎಂದೇ ತಿಳಿದು ಆರಾಧಿಸಿಕೊಂಡು ಬರುತ್ತಿದ್ದಾರೆ. '>
Curated byHemanth kumar S|Vijaya Karnataka Web|26 May 2023
ಮೂಡಬಿದ್ರೆ: ಮೂಡಬಿದ್ರೆ ಬಳಿಯ ಮಾರ್ನಾಡು ಗುತ್ತು ಬಳಿ ಪಿಜತ್ತಕಟ್ಟೆ ಮನೆಯಲ್ಲಿ "ಮಂತ್ರದೇವತೆ" ದೈವಕೋಲವು ಗುರುವಾರ ರಾತ್ರಿ 9 ಗಂಟೆಗೆ ಆರಂಭವಾಗಿ ತಡರಾತ್ರಿ 2 ಗಂಟೆಯವರೆಗೂ ನಡೆಯಿತು. ಮಂತ್ರದೇವತೆಯನ್ನು ತುಳುನಾಡಿನ ಎಲ್ಲೆಲ್ಲೂ ಈ ಶಕ್ತಿಯನ್ನು ಮನೆಯ ಒಳಗೇ ನಂಬಿಕೊಂಡು ಆರಾಧಿಸುತ್ತಾರೆ.ಮಂತ್ರದೇವತೆಯೆಂದರೆ ಒಂದು ಮಾಯಾಶಕ್ತಿಯಾಗಿದ್ದು, ಇದಕ್ಕೆ ಕೋಲ ನಡೆಯಬೇಕಾದರೆ, ಕಾಯದಲ್ಲಿ ನಲಿಕೆಯವರು ಕೋಲ ಕಟ್ಟಬೇಕು. ಮನೆಯಲ್ಲಿ ಶುಭ ಸಂದರ್ಭಗಳಾದ ಗೃಹ ಪ್ರವೇಶ, ಮದುವೆ ಸಮಾರಂಭ ಅಥವಾ ಹರಕೆ ಹೊತ್ತಂತ ಸಂದರ್ಭದಲ್ಲಿ ಕೋಲ ನಡೆಸುತ್ತಾರೆ. ಮಂತ್ರದೇವತೆ ಶಕ್ತಿಯು ತುಳುನಾಡಿನ ನೂರರಲ್ಲಿ ಹತ್ತು ಮನೆಯವರು, ನಂಬಿಕೊಂಡು ಆರಾಧಿಸುತ್ತಾ ಬರುತ್ತಿದ್ದಾರೆ. ಮಂತ್ರ ಮೂರುತಿ ಎಂದು ಕರೆಸಿಕೊಳ್ಳುವ ಶಕ್ತಿಯನ್ನು ಕೆಲವರು ಬೀರು ಮಲ್ಉಡನ ಒಡ ಹುಟ್ಟಿದ ಸಹೋದರಿ, 'ಸತ್ಯಮ್ಮನ ಇನ್ನೊಂದು ಅವತಾರ ಎಂದೇ ತಿಳಿದು ಆರಾಧಿಸಿಕೊಂಡು ಬರುತ್ತಿದ್ದಾರೆ.