ನಮ್ಮ ನೆಲ-ಜಲ-ಭಾಷೆಗೆ ಪ್ರಾಣಕೊಡಲು ಸಿದ್ಧ, ಕಾವೇರಿ ಹೋರಾಟದ ಬಗ್ಗೆ ಕರೆ ಬಂದಿಲ್ಲ: ರಾಘವೇಂದ್ರ ರಾಜಕುಮಾರ್
1068 views
mysuru ವಿಡಿಯೋಗಳಿಗೆ ಚಂದಾದಾರರಾಗಿಮೈಸೂರು: ಕಾವೇರಿ ಹೋರಾಟದ ವಿಚಾರದಲ್ಲಿ ಸ್ಯಾಂಡಲ್ವುಡ್ ನಟರು ಮೌನ ವಹಿಸಿರುವ ವಿಚಾರವಾಗಿ ಮೈಸೂರಿನಲ್ಲಿ ನಟ ರಾಘವೇಂದ್ರ ರಾಜಕುಮಾರ್ ಪ್ರತಿಕ್ರಿಯಿಸಿದರು. ''ನೆಲ-ಜಲ-ಭಾಷೆಯ ವಿಚಾರಕ್ಕೆ ನಮ್ಮ ಪ್ರಾಣ ಕೊಡಲು ಸಿದ್ಧ ಎಂದು ನಮ್ಮ ತಂದೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಇಡೀ ಕುಟುಂಬ ಸಿನಿಮಾ ಇಂಡಸ್ಟ್ರಿಯ ರೈತರ ಜೊತೆ ನಿಲ್ಲುತ್ತೇವೆ'' ಎಂದರು.
''ಇದು ಸರ್ಕಾರಕ್ಕೆ ಬಿಟ್ಟ ವಿಚಾರ. ಸರ್ಕಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಜನರು ಎಲೆಲ್ಲಿ ಕರೆಯುತ್ತಾರೋ ಅಲ್ಲಿಗೆ ನಾವು ಹೋಗಾಬೇಕಾಗುತ್ತದೆ. ನಾವು ಬರಿ ಸಿನಿಮಾ ತೋರಿಸಲಿಕ್ಕೆ ಇಲ್ಲ. ನೆಲ, ಜಲ, ಭಾಷೆಗೆ ಕಷ್ಟ ಬಂದಾಗ ನಾವು ಹೋಗಲೇಬೇಕು. ಆ ದಿನಗಳು ಹತ್ತಿರ ಬಂದಾಗ ಕರೆ ಬರುತ್ತದೆ. ಫಿಲ್ಮ್ ಅಸೋಸಿಯೇಷನ್ ನಿಂದ ಕರೆ ಬರುತ್ತದೆ, ಆಗ ನಾವು ಹೋರಾಟಕ್ಕೆ ಧುಮುಕುತ್ತೇವೆ. ಒಬ್ಬೊಬ್ಬರೇ ಹೋರಾಟಕ್ಕೆ ಬಂದರೆ ಹೆಸರು ಮಾಡಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ. ನಮ್ಮ ಒಕ್ಕೂಟದಿಂದ ಬರುವ ಕರೆಗೆ ನಾವು ಕಾಯುತ್ತಿದ್ದೇವೆ. ಅಲ್ಲಿ ಹೋರಾಟದ ರೂಪುರೇಷೆ ಸಿದ್ಧ ಪಡಿಸುತ್ತೇವೆ. ಆ ದಿನಕ್ಕಾಗಿ ಕಾಯುತ್ತಿದ್ದೇವೆ'' ಎಂದರು ಹೇಳಿದರು.
''ರೈತರು ಹೋರಾಟಕ್ಕೆ ಕರೆದರೆ ನಾವು ಹೋಗಲೇ ಬೇಕು, ಇದು ನಮ್ಮ ಧರ್ಮ. ರಾಜಕುಮಾರ್ ಅವರೇ ಬೇರೆ. ಅವರು ಒಬ್ಬರು ನಿಂತರೇ ಇಡೀ ಇಂಡಸ್ಟ್ರಿ ಅವರ ಪರವಾಗಿ ನಿಲ್ಲುತ್ತಿತ್ತು. ಆ ಜಾಗ ತುಂಬಿಸಲು ಈಗ ಯಾರಿದಂಲೂ ಸಾಧ್ಯವಿಲ್ಲ. ಫಿಲ್ಮ್ ಅಸೋಸಿಯೇಷನ್ ನಿಂದ ಇನ್ನೂ ಯಾವುದೇ ಕರೆ ಬಂದಿಲ್ಲ. ಒಬ್ಬೊಬ್ಬರೇ ಹೋರಾಟದಲ್ಲಿ ಭಾಗಿಯಾಗಬಾರದು. ಎಲ್ಲರೂ ರಾಜಕುಮಾರ್ ಆಗಲು ಸಾಧ್ಯವಿಲ್ಲ. ರಾಜಕುಮಾರ್ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆ ಶಕ್ತಿ ಯಾರಲ್ಲಿ ಇದೆ ನೀವೇ ಹೇಳಿ'' ಎಂದು ರಾಘವೇಂದ್ರ ರಾಜಕುಮಾರ್ ಅಭಿಪ್ರಾಯ ಪಟ್ಟರು.