ಸರಳ ದಸರಾದಿಂದ ಪ್ರವಾಸೋದ್ಯಮಕ್ಕೆ ಹೊಡೆತ, ಹದಗೆಟ್ಟ ರಸ್ತೆ ಸರಿಯಾಗೋದು ಕಷ್ಟ: ಶಾಸಕ ಶ್ರೀವತ್ಸ
1071 views
mysuru ವಿಡಿಯೋಗಳಿಗೆ ಚಂದಾದಾರರಾಗಿಮೈಸೂರು: ಸರಳ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಶ್ರೀವತ್ಸ ಟಾಂಗ್ ನೀಡಿದ್ದಾರೆ. ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕೋವಿಡ್ ವೇಳೆ ನಾವು ಸಾಂಪ್ರಾದಾಯಿಕ ದಸರಾ ಆಚರಿಸಿದ್ದೇವೆ. ಮಾವುತರು, ಕಾವಾಡಿಗಳಿಗೆ ಒಳ್ಳೆಯ ಭೋಜನ ವ್ಯವಸ್ಥೆ ಮಾಡಿದ್ದೇವೆ. ಸರಳ ದಸರಾ ಆಚರಣೆಯಿಂದ ಪ್ರವಾಸಿಗರ ಆಗಮನ ಕಡಿಮೆಯಾಗುತ್ತೆ. ಸರ್ಕಾರ ಈ ಸಂಬಂಧ ಸ್ಪಷ್ಟತೆ ನೀಡಬೇಕು ಎಂದು ಕೆ.ಆರ್. ಕ್ಷೇತ್ರದ ಶಾಸಕ ಶ್ರೀವತ್ಸ ಹೇಳಿದರು. ಅರಮನೆ ಆವರಣಕ್ಕೆ ಸೀಮಿತವಾಗಿ ದಸರಾ ಆಚರಿಸೋದು ಮೆಚ್ಚುವಂಥದಲ್ಲ. ಸರಳ ದಸರಾ ಆಚರಣೆ ಎಂದರೆ ಎಷ್ಟರ ಮಟ್ಟಿಗೆ ಹಬ್ಬ ಮಾಡುತ್ತಾರೆ, ಆಚರಣೆಗೆ ಎಷ್ಟು ಅನುದಾನ ತರ್ತಾರೆ ಎಂದು ಕಾದು ನೋಡಬೇಕು ಎಂದರು.
ದಸರಾ ವೇಳೆ ಹದಗೆಟ್ಟ ರಸ್ತೆಗಳ ಕಾಮಗಾರಿಯಾಗುತ್ತೆ ಎಂದುಕೊಂಡಿದ್ದೆವು. ಆದರೆ, ಸರಳ ದಸರಾದಿಂದ ರಸ್ತೆ ಕಾಮಗಾರಿ ನಡೆಯಲ್ಲ ಎಂಬ ಆತಂಕವಿದೆ. ಬೀದಿಬದಿ ವ್ಯಾಪಾರಿಗಳು, ಬಂಡವಾಳ ಹೂಡಿಕೆದಾರರಿಗೆ ತೊಂದರೆಯಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಬಾರಿ ಸರಳ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರದ ನಿರ್ಧಾರದಿಂದ ಪ್ರವಾಸಿಗರು, ಉದ್ಯಮಿಗಳಿಗೆ ನಿರಾಸೆ ಉಂಟಾಗಿದೆ . ಮೈಸೂರಿನ ಪ್ರವಾಸೋದ್ಯಮದ ಮೇಲೆ ಕೂಡ ಪರಿಣಾಮ ಬೀರೋದು ನಿಶ್ಚಯವಾಗಿದೆ. ರಾಜ್ಯ ಸರ್ಕಾರ ದಸರಾಗೆ ನೀಡುವ ಅನುದಾನದಲ್ಲಿಯೂ ಕಡಿತವಾಗಲಿದೆ ಎನ್ನಲಾಗುತ್ತದೆ ಎಂದರು.