ಮೈಸೂರಿನಲ್ಲಿ ಕಾವೇರಿ ಹೋರಾಟ, ಕಾಡಾ ಕಚೇರಿಗೆ ರೈತರ ಮುತ್ತಿಗೆ ಯತ್ನ
1058 views
mysuru ವಿಡಿಯೋಗಳಿಗೆ ಚಂದಾದಾರರಾಗಿತಮಿಳುನಾಡಿಗೆ ನೀರು ಹರಿಸುವ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಖಂಡಿಸಿ ಮೈಸೂರಿನ ಕಾಡಾ ಕಚೇರಿ ಮುಂಭಾಗ ರೈತರು ಸಾಮೂಹಿಕ ಹೋರಾಟ ನಡೆಸಿದರು.
ಕಾಡಾ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ಕನ್ನಡ ಪರ ಸಂಘಟನೆಗಳು ಕಾವೇರಿಗಾಗಿ ಪ್ರತಿಭಟನೆ ನಡೆಸಿದರು. ಖಾಲಿ ಕೊಡ ಕೊರಳಿಗೆ ಸುತ್ತಿಕೊಂಡು, ಸ್ಟಾಲಿನ್ ಫೋಟೋಗೆ ಮಹಿಷಾಸುರನಂತೆ ಚಿತ್ರಿಸಿ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಸಂಕಷ್ಟ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು, ನೀರು ಉಳಿಸಿಕೊಳ್ಳುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಸದರು ಸತ್ತೋದ್ರಲ್ಲಪ್ಪ ಎಂದು ಬಾಯಿ ಬಡಿದುಕೊಂಡು ಆಕ್ರೋಶ ಹೊರಹಾಕಿದರು.