ಶುಕ್ರವಾರ ನಮಾಜ್ಗಾಗಿ ಪರೀಕ್ಷಾ ವೇಳಾಪಟ್ಟಿ ಬದಲು ಆರೋಪ, ಚಕ್ರವರ್ತಿ ಸೂಲಿಬೆಲೆ ತಲೆಹರಟೆ: ಮಧು ಬಂಗಾರಪ್ಪ
1134 views
ಮೈಸೂರು ವಿಡಿಯೋಗಳಿಗೆ ಚಂದಾದಾರರಾಗಿಮೈಸೂರು: '' ಚಕ್ರವರ್ತಿ ಸೂಲಿಬೆಲೆ ತಲೆಹರಟೆ. ಅವನಿಗೆ ಮಾನ-ಮರ್ಯಾದೆ ಇಲ್ಲ'' ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಶುಕ್ರವಾರ ನಮಾಜ್ಗೆ ಅವಕಾಶ ನೀಡಲು ಪರೀಕ್ಷಾ ವೇಳಾಪಟ್ಟಿ ಬದಲಿಸಿದ್ದಾರೆ ಎಂದು ಆತ ಟ್ವೀಟ್ ಮಾಡಿದ್ದಾನೆ. ಇದು ವಿಷ ಬೀಜ ಬಿತ್ತುವ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಮನ್ ಸೆನ್ಸ್ ಇಲ್ಲದೇ ಏನೇನೋ ಹೇಳುತ್ತಿದ್ದಾರೆ. ಯಾವುದೇ ವಿಚಾರವನ್ನು ಭಾವನಾತ್ಮಕ ಮಾಡಿದಷ್ಟೂ ನಿಮ್ಮನ್ನು ಜನ ದೂರ ತಳ್ಳುತ್ತಾರೆ. ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪಿಯುಸಿ ಪರೀಕ್ಷೆಗಳು ಇರುವ ಕಾರಣಕ್ಕೆ ಸ್ಥಳ ಸರಿದೂಗಿಸಲು ಶುಕ್ರವಾರದ ಪರೀಕ್ಷೆಯ ಸಮಯ ಬದಲಾಗಿದೆ ಅಷ್ಟೇ. ಎಚ್ಡಿ ಕುಮಾರಸ್ವಾಮಿ ಸಿಎಂ ಆಗಿದ್ದವರು. ಅವರಿಗೂ ಇದೆಲ್ಲಾ ಗೊತ್ತಾಗಬೇಕಿತ್ತು. ಯಾವುದೋ ಮೂಲೆಯಲ್ಲಿ ಕುಳಿತು ಟ್ವೀಟ್ ಮಾಡುವುದು ಸರಿಯಲ್ಲ. ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಚುನಾವಣೆ ಗೆಲ್ಲಲು ಆಗಲ್ಲ. ಇದು ಕಳೆದ ವಿಧಾನಸಭೆ ಚುನಾವಣೆಯಲ್ಲೇ ಸಾಬೀತಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಎಸ್ಎಸ್ಎಲ್ಸಿ-ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಯನ್ನು ತರುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದರು. ಒಮ್ಮೆ ಫೇಲಾದ ನಂತರ ಸಪ್ಲಿಮೆಂಟರಿ ಪರೀಕ್ಷೆ ಇರಲಿದೆ. ಆದರೆ, ಮಾರ್ಕ್ಸ್ ಕಾರ್ಡ್ ನೀಡುವಾಗ ಸಪ್ಲಿಮೆಂಟರಿ ಎಂದು ನಮೂದಿಸಲ್ಲ. ಇನ್ನು ಶಾಲಾ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ, ಚಿಕ್ಕಿ ನೀಡಲಾಗುವುದು. ವಾರದಲ್ಲಿ ಆರು ದಿನ ಕ್ಷೀರ ಭಾಗ್ಯದ ಹಾಲು ನೀಡಲು ಕ್ರಮ ಕೈಗೊಳ್ಳಲಾಗಿದ್ದು, 3 ದಿನ ಹಾಲಿಗೆ ರಾಗಿ ಮಾಲ್ಟ್ ಮಿಕ್ಸ್ ಮಾಡಿ ಕೊಡಲಾಗುತ್ತದೆ. ಜೊತೆಗೆ ಶಾಲಾ ಬ್ಯಾಗ್ ಹೊರೆಯೂ ಕಡಿಮೆ ಮಾಡಲಾಗುತ್ತದೆ. ಸರ್ಕಾರಿ ಶಾಲೆಗಳನ್ನು ಉನ್ನತೀಕರಣ ಮಾಡೋದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.