ಅರಮನೆಯಲ್ಲಿ ಗಣಪತಿ ಹಬ್ಬದ ಅಂಗವಾಗಿ ಗಜಪಡೆಗೆ ವಿಶೇಷ ಪೂಜೆ..!
ಮೈಸೂರು: ಅರಮನೆ ನಗರಿ ಮೈಸೂರಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರತ್ಯಕ್ಷ ಗಣಪ ದಸರಾ ಆನೆಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಲಾಯ್ತು. ಜಂಬೂ ಸವಾರಿ ನಡೆಸಿಕೊಡುವ ಸಲುವಾಗಿ ಮೈಸೂರು ಅರಮನೆಯಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳಿಗೆ ಅರಮನೆ ಅರ್ಚಕ ಪ್ರಹ್ಲಾದ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯ್ತು. ಈ ವೇಳೆ ಉಡುಪಿ ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯೂ ಭಾಗಿಯಾಗಿದ್ದರು. ಆನೆಗಳಿಗೆ ಹೂ ಹಾರ ಹಾಕಿ, ಕಬ್ಬು, ಸಿಹಿ ತಿನಿಸು ನೀಡಿದ್ರು. ಬಳಿಕ ಅರಣ್ಯ ಸಿಬ್ಬಂದಿ, ಮಾವುತರು, ಕಾವಾಡಿಗರಿಗೆ ಸ್ವಾಮೀಜಿ ಸನ್ಮಾನ ಮಾಡಿ ಗೌರವಿಸಿದ್ರು..
ಈ ಬಾರಿ ಚಾತುರ್ಮಾಸ ವ್ರತಾಚರಣೆಯ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲೇ ಇರುವ ಪೇಜಾವರ ಶ್ರೀಗಳು, ಗಣೇಶ ಗೌರಿ ಹಬ್ಬದ ಹಿನ್ನೆಲೆಯಲ್ಲಿ ಅರಮನೆಗೆ ಆಗಮಿಸಿ, ಗಜಪಡೆಗೆ ಪೂಜೆ ಸಲ್ಲಿಸಿ, ನಂತರ ಎಲ್ಲಾ ಗಜಪಡೆಗೂ ಬಾಳೆಹಣ್ಣು ತಿನ್ನಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ್ರು. ಈ ಬಾರಿ ನಾಡ ಹಬ್ಬ ದಸರಾ ಯಾವುದೇ ವಿಘ್ನಗಳಿಲ್ಲದೆ ನಿರ್ವಿಘ್ನವಾಗಿ ನಡೆಯಲಿ ಎಂದು ವಿನಾಯಕ ಹಾಗೂ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಅರಣ್ಯಾಧಿಕಾರಿ ಸೌರಬ್ ಕೂಡ ಮಾತಾಡಿ, ಗಣೇಶ ಚತುರ್ಥಿಯ ದಿನ ಗಜಪಡೆಗೆ ಪೂಜೆ ಸಲ್ಲಿಸುವಾಗಲೇ ಮಳೆ ಕೂಡ ಬಂದಿದ್ದು, ಇದು ಶುಭ ಸೂಚನೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಮಳೆ ಬರಲಿ, ಎಲ್ಲವೂ ಒಳ್ಳೆಯದಾಗಲಿ ಎಂದು ತಾಯಿಯನ್ನು ಪ್ರಾರ್ಥಿಸುತ್ತೇನೆ ಎಂದರು. ರಾಜ್ಯದಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ಉಂಟಾಗಿದ್ದರೂ, ಗಜಪಡೆಗೆ ಪೂಜೆ ಸಲ್ಲಿಸುವಾಗ ಜೋರಾದ ಮಳೆ ಬಂದಿರೋದು ಸಂತಸ ತಂದಿದೆ ಅಂತ ಹೇಳಿದ್ರು..
ನಗರದ ದೇವರಾಜ ಮೊಹಲ್ಲಾದಲ್ಲಿ ಚಂದ್ರಯಾನ ಗಣಪತಿ ಎಲ್ಲರ ಗಮನ ಸೆಳೆಯುತ್ತಿದೆ. ISROದ ಚಂದ್ರಯಾನ-3 ಯಶಸ್ಸನ್ನ ಆಧಾರವಾಗಿಟ್ಟುಕೊಂಡು ಕೊತ್ವಾಲ್ ರಾಮಯ್ಯ ರಸ್ತೆಯ ರಾಮಮಂದಿರ ಬಳಿಯಲ್ಲಿ ಚಂದ್ರಯಾನ ಗಣಪತಿಯನ್ನ ಪ್ರತಿಷ್ಠಾಪಿಸಲಾಗಿದೆ. ಚಂದ್ರಯಾನ-3 ಚಂದ್ರನ ಕಕ್ಷೆ ಸೇರಿದ ಬಳಿಕ ವಿಕ್ರಮ್ ಲ್ಯಾಂಡರ್ ರೋವರ್ ಹೊರ ಬಂದು ಕಾರ್ಯಾಚರಣೆ ಮಾಡಿದ್ದನ್ನ ಬಿಂಬಿಸುವ ರೀತಿ ಕಲಾಕೃತಿ ಕಲಾವಿದ ಮಂಜು ಕುಂಚದಲ್ಲಿ ಮೂಡಿ ಬಂದಿದೆ. ಇನ್ನ ಕಲಾಕೃತಿ ನಡುವೆ ಗೌರಿ-ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪಿಸಲಾಗಿದ್ದು, ಇದು ಎಲ್ಲರ ಗಮನ ಸೆಳೆದಿದೆ.

Curated by Shivamoorthi M|TimesXP Kannada|18 Sept 2023