ನನಗೆ ಸಾಕಷ್ಟು ಸಮಸ್ಯೆ ಇರುವ ಖಾತೆ ಕೊಟ್ಟಿದ್ದಾರೆ ; ಸ್ವಲ್ಪ ಸಮಯ ಕೊಡಿ ; ಮಧು ಬಂಗಾರಪ್ಪ
1696 views
raichur ವಿಡಿಯೋಗಳಿಗೆ ಚಂದಾದಾರರಾಗಿರಾಯಚೂರು:ಕಾವೇರಿ ವಿಚಾರದಲ್ಲಿ ನಮ್ಮ ತಂದೆ ಬಂಗಾರಪ್ಪನವರು ಇರಬೇಕಾದಾಗ ಕಾನೂನು ಬೇರೆ ರೀತಿ ಇತ್ತು, ಈಗ ಬೇರೆ ರೀತಿ ಇದೆ. ಆಗ ಬಂಗಾರಪ್ಪನವರು ಚಿಟಿಕೆ ಹೊಡೆಯುವುದರಲ್ಲಿ ಉತ್ತರ ಕೊಟ್ಟಿದ್ದರು. ಆದರೆ ಈಗ ಹಾಗೇ ಹೇಳಲು ಆಗಲ್ಲ, ಕಾನೂನು ತುಂಬಾ ಸ್ಟ್ರಾಂಗ್ ಇದೆ, ಮೈಮೇಲೆ ಬಂದು ಬಿಡುತ್ತೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು ಕಾವೇರಿ ನೀರಿನ ಬಿಕ್ಕಟ್ಟು ಕುರಿತಂತೆ ಮಾತನಾಡಿದರು, ಸಿಎಂ ಸಿದ್ದರಾಮಯ್ಯನವರು ಬಂಗಾರಪ್ಪ ತೆಗೆದುಕೊಂಡ ತೀರ್ಮಾನವನ್ನು ಈಗ ತೆಗೆದುಕೊಂಡರೆ ಅವರ ಜೊತೆ ನಾವು ಇರುತ್ತೇವೆ. ಅಂತ ಸಂದರ್ಭ ಬಂದರೆ ಸಿದ್ದರಾಮಯ್ಯನವರು ಅಂತವರೇ, ಪ್ರಾಧಿಕಾರ ವಿರುದ್ದ ಹೋಗಿದ್ದಕ್ಕೆ ಹೈ ಕೋರ್ಟ್ನಲ್ಲಿ ಆಗ ನಮಗೆ ಛೀಮಾರಿ ಹಾಕಿದ್ದರು. ಅಷ್ಟರೊಳಗೆ ನಮ್ಮ ತಂದೆಯವರು ಏನೇನ್ ಮಾಡಬೇಕೋ ಮಾಡಿ ಮುಗಿಸಿಬಿಟ್ಟಿದ್ದರು ಎಂದು ತಿಳಿಸಿದರು.
ಇನ್ನೂ ಖಾತೆ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ನನಗೆ ಕಷ್ಟವಾದ ಖಾತೆ ಕೊಡಿ ಎಂದು ಹೇಳಿದ್ದೆ ಡಿಕೆಶಿಯವರು, ನನಗೆ ಸಿದ್ದರಾಮಯ್ಯನವರು ಸುಲಭದ ಖಾತೆ ಕೊಡಲು ತೀರ್ಮಾನಿಸಿದ್ದರು, ಆದ್ರೆ ಡಿಕೆಶಿವಕುಮಾರ್ ಮಾತ್ರ ಮಧುಗೆ ಕಷ್ಟದ ಖಾತೆಯನ್ನು ಕೊಡಿ, ಅವನು ಎಲ್ಲವನ್ನು ನಿಭಾಯಿಸುತ್ತಾನೆ ಎಂದು ಈ ಖಾತೆಯನ್ನು ಕೊಟ್ಟಿದ್ದಾರೆ ಅಂದ್ರು. ಸಾಕಷ್ಟು ಸಮಸ್ಯೆ ಇರುವ ಖಾತೆಯನ್ನು ನನಗೆ ಕೊಟ್ಟಿದ್ದಾರೆ. ಸ್ವಲ್ಪ ಸಮಯ ಕೊಟ್ರೆ ನಾನು ಮಾಡುತ್ತೇನೆ ಎಂದು ಹೇಳಿದರು. ಮಕ್ಕಳಿಗೆ ಮೊಟ್ಟೆ ಕೊಡುವುದು ನನ್ನ ಮಿತಿಯೊಳಗೆ ಇತ್ತು, ಹಾಗಾಗಿ 10ನೇ ತರಗತಿವರೆಗೆ ನಾನು ಮೊಟ್ಟೆಯನ್ನು ಕೊಡಲು ಹೇಳಿದ್ದೆ, ಸಿದ್ದರಾಮಯ್ಯ ಬಳಿ ಅನುದಾನ ಕೇಳಿದ್ದೆ, ಅನುದಾನ ಕೊಟ್ಟರು ಅಂದ್ರು,