'ಸ್ಟಾಲಿನ್ ಮತ್ತೆ ಹುಟ್ಟಿ ಬರಬೇಡಿ', ರಾಮನಗರದಲ್ಲಿ ತಮಿಳುನಾಡು ಸಿಎಂ ತಿಥಿ ಮಾಡಿ ಪ್ರತಿಭಟನಾಕಾರಿಂದ ಶ್ರದ್ಧಾಂಜಲಿ
1290 views
ramanagara ವಿಡಿಯೋಗಳಿಗೆ ಚಂದಾದಾರರಾಗಿರಾಮನಗರ: ರೇಷ್ಮೆನಾಡು ರಾಮನಗರದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು, ಮಂಗಳವಾರ ರೈತ ಸಂಘಟನೆಗಳಿಂದ ರಾಮನಗರ ಬಂದ್ ಆಚರಿಸಲಾಗುತ್ತಿದೆ. ಬೆಳ್ಳಂಬೆಳಿಗ್ಗೆಯೇ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ಆರಂಭವಾಗಿದ್ದು, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ 'ತಿಥಿ' ಮಾಡಿದ್ದಾರೆ.
ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿ ರಾಮನಗರ ಬಂದ್ಗೆ ಕರೆ ನೀಡಲಾಗಿದೆ. ಪ್ರತಿಭಟನಾಕಾರರು ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಸ್ಟಾಲಿನ್ ಭಾವಚಿತ್ರವಿರುವ ಫ್ಲೆಕ್ಸ್ ಹಾಕಿ, ಅದಕ್ಕೆ ಹೂವಿನ ಹಾರ ಹಾಕಿ ಅಣಕು ತಿಥಿ ಮಾಡಿದರು. ಪ್ರತಿಭಟನಾಕಾರರು ಸ್ಟಾಲಿನ್ ಭಾವಚಿತ್ರದ ಮುಂದೆ ನಿಂತು ಶ್ರದ್ಧಾಂಜಲಿ ಕೋರಿ ಮೌನಾಚರಣೆ ನಡೆಸಿದರು. ಸ್ಟಾಲಿನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ, ಮತ್ತೆ ಹುಟ್ಟಿ ಬರಬೇಡಿ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಕನ್ನಡ ಜನಪರ ವೇದಿಕೆ ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.