ನಾಳೆ ಅಧಿಕೃತವಾಗಿ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ
ಶಿವಮೊಗ್ಗ ವಿಡಿಯೋಗಳಿಗೆ ಚಂದಾದಾರರಾಗಿ
ಶಿವಮೊಗ್ಗ: ಕೆಲವು ದಿನಗಳಿಂದ ನನ್ನ ಬಗ್ಗೆ ರಾಜಕೀಯ ಕೇಂದ್ರಿತ ಸುದ್ದಿಗಳು ಹರಿದಾಡುತ್ತಿವೆ, ಎಲ್ಲರ ನಿರೀಕ್ಷೆಯಂತೆ ನಾನು ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾಳೆ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಹಲವು ಮುಖಂಡರೊಂದಿಗೆ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ಹೇಳಿದರು. ನಾನು ನನ್ನ ಸ್ನೇಹಿತರ ಜೊತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆ ವೇಳೆಯೇ ಕಾಂಗ್ರೆಸ್ ಸೇರಬೇಕಿತ್ತು. ಆಗ ಜೆಡಿಎಸ್ನಿಂದ ನಾನು ಸ್ಪರ್ಧೆಗಿಳಿಯಬೇಕಾಯಿತು, ಮುಂಬರುವ ಚುನಾವಣೆಯಲ್ಲಿ ಸಮಯ, ಶಕ್ತಿ ನೀಡಿ ದುಡಿಯುವ ನಿಲುವನ್ನು ಹೊಂದಿದ್ದೇನೆ, ಮುಂಬರುವ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ. ಕಾಂಗ್ರೆಸ್ಗೆ ಈಗ ಸೇರಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಈ ಹಿಂದೆ ಅನಿವಾರ್ಯವಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದೆ. ಇದು ನನ್ನ ಕೊನೆಯ ಬಸ್ ಸ್ಟಾಪ್ ಆಗಿದೆ. ಆತಂಕಕ್ಕೆ ಒಳಗಾಗಿರುವ ಕೆಲ ನಾಲ್ಕು ಜನರು ನನಗೆ ವಿರೋಧಿಸುತ್ತಿದ್ದಾರೆ. ಕೆಲವರ ವಿರೋಧ ಇದ್ದರೂ ಶೇ.99 ರಷ್ಟು ಜನರು ನನ್ನನ್ನು ಒಪ್ಪಿದ್ದಾರೆ. ನನಗೆ ವಿರೋಧಿಸುವವರಿಗೆ ನಾನು ಯಾವುದೇ ಅಡ್ಡಿಯಾಗಲ್ಲ. ನಿರಾಸೆಯಾದವರು ಯಾಕೋ ಆತಂಕಕ್ಕೊಳಗಾಗಿದ್ದಾರೆ. ನಾನು ಮತ್ತಷ್ಟು ಬಲ ತುಂಬಲು ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುತ್ತಿದ್ದೇನೆ. ವಿರೋಧ ಮಾಡುವವರಿಗೆ ನಾನು ಅಡ್ಡಿಯಾಗಲ್ಲ ಎಂದರು