ಹೈಕಮಾಂಡ್ ಕಾರಣ ಇಲ್ಲದೇ ವಿಪಕ್ಷ ನಾಯಕನ ಆಯ್ಕೆ ವಿಳಂಬ ಮಾಡಿಲ್ಲ ; ಸಿಟಿ ರವಿ
1504 views
shivamogga ವಿಡಿಯೋಗಳಿಗೆ ಚಂದಾದಾರರಾಗಿಶಿವಮೊಗ್ಗ:ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ನನಗೆ ಅಧಿಕೃತ ಮಾಹಿತಿ ಇಲ್ಲ. ನಮ್ಮ ಮುಖಂಡರ ಹೇಳಿಕೆಗಳನ್ನ ನಾನು ಗಮನಿಸಿದ್ದೇನೆ. ಮೈತ್ರಿ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಯನ್ನೂ ನಾನು ಗಮನಿಸಿದ್ದೇನೆ. ಊರಿಗೆ ಬಂದವಳು ನೀರಿಗೆ ಬರೋದಿಲ್ವಾ..? ನೋಡೋಣ ಎಂದರು.
ಮೈತ್ರಿ ಬಗ್ಗೆ ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಂಡರೂ ಕೂಡ ಅಳೆದು ತೂಗಿ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಅವರ ತೀರ್ಮಾನಕ್ಕೆ ಕಾದಿದ್ದೇವೆ. ಸದ್ಯ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಏನು ಪ್ರಯತ್ನ ಮಾಡಬೇಕೋ ಅದನ್ನ ಮಾಡುತ್ತೇವೆ. ಜೆಡಿಎಸ್ ಜೊತೆ ಮೈತ್ರಿ ಅಗತ್ಯ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಕೆಲ ಸಂಗತಿಗಳನ್ನ ಸಾರ್ವಜನಿಕವಾಗಿ ಮಾತನಾಡುವುದು ಸರಿ ಅಲ್ಲ ಎಂದರು.
ಬಿಜೆಪಿವಿಪಕ್ಷ ನಾಯಕನ ಆಯ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರು ಕಾರಣವಿಲ್ಲದೇ ವಿಳಂಬ ಮಾಡಿಲ್ಲ ಎಂಬ ನಂಬಿಕೆ ಇದೆ. ಏನು ಎಂದು ನಮಗೆ ಗೊತ್ತಿಲ್ಲ. ನಾವೂ ಕೂಡ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಆದಷ್ಟು ಬೇಗ ಆಗಲಿ. ಮುಂದಾಳತ್ವದ ಸೇನಾನಿ ಇಲ್ಲದೇ ಯುದ್ಧ ಗೆದ್ದ ಉದಾಹರಣೆಗಳಿವೆ. ಆದರೆ ಸೇನಾನಿಗಳು ಮುಖ್ಯ, ಬೇಕೇ ಬೇಕು. ಬಿಜೆಪಿ ಪ್ರಯೋಗಶೀಲ ಪಕ್ಷ. ನಾವು ಪ್ರಯೋಗಗಳನ್ನೂ ಮಾಡುತ್ತಿರುತ್ತೇವೆ ಎಂದರು.
ಕಾಂಗ್ರೆಸ್ ಗ್ಯಾರಂಟಿಗಳನ್ನ ಕಂಡೀಷನ್ ಹಾಕಿ ಜಾರಿ ಮಾಡಿದ್ದಾರೆ. ಒಂದು ರಾಜ್ಯದ ಅಭಿವೃದ್ಧಿಗೆ, ಮೂಲಸೌಕರ್ಯ, ಉದ್ಯೋಗ, ಸ್ವಾವಲಂಬಿ ಯೋಜನೆಗಳು ಮುಖ್ಯ. ಕೇವಲ ಚುನಾವಣೆ ಗೆಲ್ಲಬೇಕು ಎಂದು ಜನರನ್ನ ಬೇಡುವ ಸ್ಥಿತಿಗೆ ದೂಡುವುದು ಸರಿ ಅಲ್ಲ. ಅಗತ್ಯ ಇರುವವರಿಗೆ ಸವಲತ್ತು ನೀಡಬೇಕು. ಈ ಮನಸ್ಥಿತಿಯನ್ನ ಜನರಲ್ಲಿ ಶಾಶ್ವತವಾಗಿ ಇರುವಂತೆ ಮಾಡುವುದು ಒಳ್ಳೇದಲ್ಲ. ನಮಗೆ ಬೇಕಿರುವುದು ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ. ಅವರು ಅಂದಿನ ಕಾಲದಲ್ಲೇ ಮೈಸೂರು ಸಂಸ್ಥಾನ ಬ್ರಾಂಡ್ ಮಾಡಿದವರು. ಅವರ ಪ್ರೇರಣೆ ಇವರಿಗೆ ಸಿಕ್ಕಿಲ್ಲ. ಇವರಿಗೆ ಸಿಕ್ಕಿರೋದೇ ಟಿಪ್ಪು ಪ್ರೇರಣೆ ಏನು ಮಾಡೋದು..? ಎಂದರು.